ಕರ್ನಾಟಕ

karnataka

ETV Bharat / sports

Cricket World Cup: ಗ್ಲೆನ್ ಮೆಕ್‌ಗ್ರಾತ್ ಹಿಂದಿಕ್ಕಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಲ್ಲೂ ತಮ್ಮ ಹೆಸರು ಬರೆದ ಹಿಟ್​ ಮ್ಯಾನ್​ - ಭಾರತ ಏಕದಿನ ವಿಶ್ವಕಪ್ 2023

Cricket World Cup: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್​ ಮಾಡುವ ಮೂಲಕ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 100 ರನ್​ಗಳ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗಾಗಿ ರೋಹಿತ್​ಗೆ ಮ್ಯಾನ್ ಆಫ್ ದಿ ಮ್ಯಾಚ್ ಲಭಿಸಿದ್ದು, ಈ ಪ್ರಶಸ್ತಿಯಲ್ಲೂ ಅವರು ದಾಖಲೆ ಬರೆದಿದ್ದಾರೆ.

Man of the Match award  Cricket World Cup  Rohit Sharma leads from the front for India  ICC Cricket World Cup 2023  India vs England 29th Match  ಭಾರತ ತಂಡದ ನಾಯಕ ರೋಹಿತ್ ಶರ್ಮಾ  ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ  ಪ್ರಶಸ್ತಿಯಲ್ಲೂ ತನ್ನ ಹೆಸರು ಬರೆದ ಹಿಟ್​ ಮ್ಯಾನ್​ ಹಾಲಿ ಚಾಂಪಿಯನ್ ಇಂಗ್ಲೆಂಡ್  ಭಾರತ ಏಕದಿನ ವಿಶ್ವಕಪ್ 2023  ಲಖನೌ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯ
ಗ್ಲೆನ್ ಮೆಕ್‌ಗ್ರಾತ್ ಹಿಂದಿಕ್ಕಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಲ್ಲೂ ತನ್ನ ಹೆಸರು ಬರೆದ ಹಿಟ್​ ಮ್ಯಾನ್​

By ETV Bharat Karnataka Team

Published : Oct 30, 2023, 10:37 AM IST

ಲಖನೌ, ಉತ್ತರ ಪ್ರದೇಶ: ಭಾರತ ಏಕದಿನ ವಿಶ್ವಕಪ್ 2023 ರಲ್ಲಿ (Cricket World Cup) ಇದುವರೆಗೆ ಆಡಿದ ಎಲ್ಲ ಆರು ಪಂದ್ಯಗಳನ್ನು ಗೆದ್ದಿದೆ. ನಿನ್ನೆ ನಡೆದ ಲಖನೌ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ನಿರ್ಣಾಯಕ ಸಮಯದಲ್ಲಿ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದರು. ಸಂಘಟಿತ ಬೌಲಿಂಗ್​ ದಾಳಿ, ಆಟಗಾರರ ಉತ್ತಮ ಪ್ರದರ್ಶನದಿಂದ ಭಾರತ ತಂಡ ಇಂಗ್ಲೆಂಡ್​ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರು. ಈ ಗೆಲುವಿನ ಮೂಲಕ ಭಾರತ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸೆಮಿಸ್ ಸ್ಥಾನವನ್ನು ಬಹುತೇಕ ಖಚಿತವಾಗಿದೆ.

ಈ ಗೆಲುವು ಸಾಕಷ್ಟು ಸಂತಸ ನೀಡಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ 87 ರನ್ ಗಳಿಸಿದ್ದಾರೆ. ದೊಡ್ಡ ಹೊಡೆತ ಹೊಡೆಯಲು ಹೋಗಿ ಔಟಾಗುವ ಮೂಲಕ ಶತಕ ವಂಚಿತರಾದರು. ರೋಹಿತ್ ಸೇರಿದಂತೆ ಬಹುತೇಕರು ಅನಗತ್ಯ ಶಾಟ್​ಗಳನ್ನು ಹೊಡೆಯಲು ಯತ್ನಿಸಿ ವಿಕೆಟ್ ಒಪ್ಪಿಸಿದ್ದರು.

ಅವರ ಅದ್ಭುತ ಆಟದ ಪ್ರದರ್ಶನಕ್ಕಾಗಿ ರೋಹಿತ್‌ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು. ಈ ವಿಶ್ವಕಪ್​ ಪಂದ್ಯಾವಳಿಯಲ್ಲಿ ರೋಹಿತ್​ಗೆ ಇದು ಎರಡನೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಾಗಿದೆ. ಮುಂಬೈನ ಆರಂಭಿಕ ಆಟಗಾರ ಇಲ್ಲಿಯವರೆಗೆ ನಡೆದ ಏಕದಿನ ವಿಶ್ವಕಪ್‌ಗಳಲ್ಲಿ ತಮ್ಮ ಏಳನೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿ ಪಡೆಯುವ ಮೂಲಕ ಅವರು ಗ್ಲೆನ್ ಮೆಕ್‌ಗ್ರಾತ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಏಕದಿನ ವಿಶ್ವಕಪ್‌ಗಳ ಇತಿಹಾಸದಲ್ಲಿ ಒಂಬತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್​ ಅವರ ದಾಖಲೆಯನ್ನು ಸರಿಗಟ್ಟಲು ರೋಹಿತ್​ ಶರ್ಮಾಗೆ ಇನ್ನೂ ಎರಡು ಹೆಜ್ಜೆ ಬೇಕಾಗಿದೆ.

ರೋಹಿತ್ ಈಗ ನಾಯಕನಾಗಿ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ, ಪಂದ್ಯಾವಳಿಯಲ್ಲಿನ ಎಲ್ಲ ನಾಯಕರಿಗೆ ಕೇವಲ ಒಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಇದು ರೋಹಿತ್‌ನ ಸಂಪೂರ್ಣ ಪ್ರಾಬಲ್ಯವನ್ನು ತೋರಿಸುತ್ತದೆ. ನವದೆಹಲಿಯ ಕೋಟ್ಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ 131 ರನ್ ಗಳಿಸಿದ ನಂತರ ರೋಹಿತ್​ ಶರ್ಮಾಗೆ ಈ ವಿಶ್ವಕಪ್​ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಭಾನುವಾರದ ಪಂದ್ಯದಲ್ಲಿ 18 ಸಾವಿರ ಅಂತಾರಾಷ್ಟ್ರೀಯ ರನ್‌ಗಳನ್ನು ದಾಟಿದ ರೋಹಿತ್ ಶರ್ಮಾ, ಈ ಆವೃತ್ತಿಯ ವಿಶ್ವಕಪ್‌ನಲ್ಲಿ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆರು ಪಂದ್ಯಗಳಿಂದ 398 ರನ್ ಗಳಿಸಿರುವ ರೋಹಿತ್, ವಿಶ್ವಕಪ್‌ನಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (413 ರನ್) ಮತ್ತು ನ್ಯೂಜಿಲೆಂಡ್‌ನ ರಚಿನ್ ರವೀಂದ್ರ (406 ರನ್) ಕ್ರಮವಾಗಿ ಮೊದಲೆರಡು ಸ್ಥಾನವನ್ನು ಅಲಂಕರಿಸಿದ್ದಾರೆ. ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತನ್ನ ತವರು ಪ್ರೇಕ್ಷಕರ ಮುಂದೆ ರೋಹಿತ್​ ಆಟದ ಪ್ರದರ್ಶನ ಕಾಣಬಹುದಾಗಿದೆ.

ODI ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳು ಪಡೆದ ಆಟಗಾರರು:

1) ಸಚಿನ್ ತೆಂಡೂಲ್ಕರ್:45 ಪಂದ್ಯಗಳು, 9 ಪ್ರಶಸ್ತಿಗಳು

2)ರೋಹಿತ್ ಶರ್ಮಾ:(23 ಪಂದ್ಯಗಳು 7* ಪ್ರಶಸ್ತಿಗಳು

3) ಗ್ಲೆನ್ ಮೆಕ್‌ಗ್ರಾತ್:39 ಪಂದ್ಯಗಳು, 6 ಪ್ರಶಸ್ತಿಗಳು

4)ಲ್ಯಾನ್ಸ್ ಕ್ಲೂಸೆನರ್: 14 ಪಂದ್ಯಗಳು, 5 ಪ್ರಶಸ್ತಿಗಳು

5) ಗ್ರಹಾಂ ಗೂಚ್:21 ಪಂದ್ಯಗಳು, 5 ಪ್ರಶಸ್ತಿಗಳು

6)ವಿವ್ ರಿಚರ್ಡ್ಸ್: 23 ಪಂದ್ಯಗಳು, 5 ಪ್ರಶಸ್ತಿಗಳು

7) ಎಬಿ ಡಿವಿಲಿಯರ್ಸ್: 23 ಪಂದ್ಯಗಳು, 5 ಪ್ರಶಸ್ತಿಗಳು

8) ಡೇವಿಡ್ ವಾರ್ನರ್, 24 ಪಂದ್ಯಗಳು, 5* ಪ್ರಶಸ್ತಿಗಳು

9) ಸನತ್ ಜಯಸೂರ್ಯ, 38 ಪಂದ್ಯಗಳು, 5 ಪ್ರಶಸ್ತಿಗಳು

*ವಿಶ್ವಕಪ್ 2023 ರಲ್ಲಿ ಭಾರತಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗಳು:

1)ಕೆಎಲ್ ರಾಹುಲ್ - ಆಸ್ಟ್ರೇಲಿಯಾ ವಿರುದ್ಧ, ಚೆನ್ನೈ

2) ರೋಹಿತ್ ಶರ್ಮಾ - ಅಫ್ಘಾನಿಸ್ತಾನ ವಿರುದ್ಧ, ನವದೆಹಲಿ

3)ಜಸ್ಪ್ರೀತ್ ಬುಮ್ರಾ - ಪಾಕಿಸ್ತಾನದ ವಿರುದ್ಧ, ಅಹಮದಾಬಾದ್

4) ವಿರಾಟ್ ಕೊಹ್ಲಿ - ಬಾಂಗ್ಲಾದೇಶ ವಿರುದ್ಧ, ಪುಣೆ

5)ಮೊಹಮ್ಮದ್ ಶಮಿ -ನ್ಯೂಜಿಲೆಂಡ್ ವಿರುದ್ಧ, ಧರ್ಮಶಾಲಾ

6) ರೋಹಿತ್ ಶರ್ಮಾ -ಇಂಗ್ಲೆಂಡ್ ವಿರುದ್ಧ, ಲಖನೌ

ಓದಿ:ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್​ಗಳು 30 ರನ್ ಕಡಿಮೆ ಸ್ಕೋರ್​ ಮಾಡಿದರು: ರೋಹಿತ್​ ಶರ್ಮಾ

ABOUT THE AUTHOR

...view details