ಮೌಂಟ್ ಮೌಂಗನೂಯಿ(ನ್ಯೂಜಿಲ್ಯಾಂಡ್):ವನಿತೆಯರ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತೀಯ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ವಿಶ್ವಕಪ್ ಅಭಿಯಾನದಲ್ಲಿ ಶುಭಾರಂಭ ಮಾಡಿತು.
ನ್ಯೂಜಿಲ್ಯಾಂಡ್ನ ಬೇ ಓವಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದು, ಭಾರತೀಯ ವನಿತೆಯರ ತಂಡ 43 ಓವರ್ಗಳಲ್ಲಿ 137 ರನ್ಗಳಿಗೆ ಪಾಕಿಸ್ತಾನ ತಂಡವನ್ನು ಆಲ್ ಔಟ್ ಮಾಡಿದೆ. ರಾಜೇಶ್ವರಿ ಗಾಯಕ್ವಾಡ್ ಮಿಂಚಿನ ಬೌಲಿಂಗ್ಗೆ ಪಾಕ್ ತಂಡ ತತ್ತರಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ 50 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ ಟೀಂ ಇಂಡಿಯಾ ಸಾಧಾರಣ ಮೊತ್ತದ ಗುರಿಯನ್ನೇ ಪಾಕ್ ತಂಡಕ್ಕೆ ನೀಡಿತ್ತು. ಭಾರತ ತಂಡದ ಪರ ಪೂಜಾ ವಸ್ತ್ರಾಕರ್ 67, ಸ್ಮೃತಿ ಮಂಧಾನಾ 52, ಸ್ನೇಹ್ ರಾಣಾ 53, ದೀಪ್ತಿ ಶರ್ಮ 40 ರನ್ ಗಳಿಸಿ ತಂಡಕ್ಕೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟಿದ್ದರು.