ಕರ್ನಾಟಕ

karnataka

ETV Bharat / sports

ಪಾಕ್​ ವಿರುದ್ಧ ಇಂಗ್ಲೆಂಡ್​ಗೆ ಜಯ: ದ.ಆಫ್ರಿಕಾ ವಿರುದ್ಧ ಗೆದ್ದರಷ್ಟೇ ಭಾರತಕ್ಕೆ ಸೆಮಿಫೈನಲ್‌ ಅವಕಾಶ - ಮಹಿಳಾ ವಿಶ್ವಕಪ್​​ನಲ್ಲಿ ಭಾರತ

ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್​ ಇದೀಗ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ. ಮುಂದಿನ ನಾಲ್ಕರ ಹಂತಕ್ಕೆ ಭಾರತ ಪ್ರವೇಶ ಪಡೆದುಕೊಳ್ಳಲು ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

ICC Women world cup
ICC Women world cup

By

Published : Mar 24, 2022, 5:10 PM IST

ವೆಲ್ಲಿಂಗ್ಟನ್​(ನ್ಯೂಜಿಲ್ಯಾಂಡ್​):ನ್ಯೂಜಿಲ್ಯಾಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಕ್ರಿಕೆಟ್‌ ವಿಶ್ವಕಪ್​ ಇದೀಗ ರೋಚಕ ಘಟ್ಟ ತಲುಪಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್​ ಭರ್ಜರಿ ಗೆಲುವು ದಾಖಲಿಸಿದೆ. ಹೀಗಾಗಿ, ಸೆಮಿಫೈನಲ್​ಗೆ ಭಾರತ ಪ್ರವೇಶ ಪಡೆದುಕೊಳ್ಳಬೇಕಾದರೆ ಮುಂದಿನ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿದೆ.

ಪಾಕಿಸ್ತಾನ ವಿರುದ್ಧ 9 ವಿಕೆಟ್​​ಗಳ ಸುಲಭ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಭಾರತ ಐದನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಂದ್ಯ ಮಳೆಯಿಂದಾಗಿ ರದ್ಧುಗೊಂಡಿದೆ. ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಈಗಾಗಲೇ ಸಮಿಫೈನಲ್​ ಸ್ಥಾನ ಖಾತ್ರಿಪಡಿಸಿಕೊಂಡಿದೆ. ಆದರೆ, ವೆಸ್ಟ್​ ಇಂಡೀಸ್​ ತಂಡ ಆಡಿರುವ ಎಲ್ಲ ಪಂದ್ಯಗಳಿಂದ 7 ಅಂಕಗಳಿಕೆ ಮಾಡಿದ್ದು, ಸೆಮೀಸ್​​ ಸ್ಥಾನ ಇತರೆ ತಂಡಗಳ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.

ಇದನ್ನೂ ಓದಿ:ಸಿಎಸ್​ಕೆ ನಾಯಕತ್ವ ಬಿಟ್ಟುಕೊಟ್ಟ ಧೋನಿಗೆ ಅಭಿಮಾನಿಗಳ 'ಸೆಲ್ಯೂಟ್'!

ಸೆಮಿಫೈನಲ್ ಲೆಕ್ಕಾಚಾರ: ಟೂರ್ನಿಯಲ್ಲಿ ಭಾಗಿಯಾಗಿದ್ದ ನ್ಯೂಜಿಲ್ಯಾಂಡ್​, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಈಗಾಗಲೇ ಪ್ರಶಸ್ತಿ ರೇಸ್​ನಿಂದ ಹೊರಬಿದ್ದಿವೆ. ಆದರೆ, ತಾನು ಆಡಿರುವ ಎಲ್ಲ ಪಂದ್ಯಗಳಲ್ಲೂ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ಮೊದಲ ತಂಡವಾಗಿ ಸೆಮಿಫೈನಲ್​ ಪ್ರವೇಶ ಪಡೆದುಕೊಂಡಿದೆ. ಉಳಿದಂತೆ 9 ಪಾಯಿಂಟ್ ಗಳಿಕೆ ಮಾಡಿರುವ ಆಫ್ರಿಕಾ ಕೂಡ ಎರಡನೇ ತಂಡವಾಗಿ ನಾಲ್ಕರ ಘಟ್ಟ ಪ್ರವೇಶಿಸಿದೆ.

ಮೂರು-ನಾಲ್ಕನೇ ಸ್ಥಾನಕ್ಕೆ ಫೈಟ್:ನಾಲ್ಕರ ಸ್ಥಾನಕ್ಕಾಗಿ ಇದೀಗ ವೆಸ್ಟ್​ ಇಂಡೀಸ್​, ಭಾರತ ಮತ್ತು ಇಂಗ್ಲೆಂಡ್ ನಡುವೆ ಫೈಟ್​ ಏರ್ಪಟ್ಟಿದೆ. ಈ ತಂಡಗಳು ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದ್ದು, ವೆಸ್ಟ್​ ಇಂಡೀಸ್ ಈಗಾಗಲೇ ಎಲ್ಲ ಪಂದ್ಯಗಳನ್ನಾಡಿ 7 ಅಂಕ ಗಳಿಸಿದೆ. ಆದರೆ, ಭಾರತ ಮತ್ತು ಇಂಗ್ಲೆಂಡ್​ಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಇಲ್ಲಿ ಗೆಲುವು ಅನಿವಾರ್ಯ.

ಭಾರತಕ್ಕೆ ಬಲಿಷ್ಠ ಆಫ್ರಿಕಾ ಸವಾಲು:ನಾಲ್ಕರ ಹಂತಕ್ಕೆ ಭಾರತ ಮಹಿಳಾ ತಂಡ ಲಗ್ಗೆ ಹಾಕಲು ಮುಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಬೇಕಿದೆ. ದ.ಆಫ್ರಿಕಾ ಈಗಾಗಲೇ ತಾನಾಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಪಡೆದಿದ್ದು, ಟೀಂ ಇಂಡಿಯಾಗೆ ಕಠಿಣ ಸವಾಲು ನೀಡುವ ಸಾಧ್ಯತೆ ಇದೆ.

ABOUT THE AUTHOR

...view details