ದುಬೈ: ಮುಂಬರುವ ಟಿ-20 ವಿಶ್ವಕಪ್ನಿಂದ ಕ್ರಿಕೆಟ್ನಲ್ಲಿ ಲಿಂಗ ಸಮಾನತೆಗಾಗಿ ಬ್ಯಾಟಿಂಗ್ ಮಾಡುವವರಿಗೆ ಬ್ಯಾಟ್ಸ್‌ಮನ್ ಎಂದು ಬಳಸುವ ಬದಲು ಬ್ಯಾಟರ್ ಎಂದು ಬಳಸುವುದಕ್ಕೆ ಗುರುವಾರ ಐಸಿಸಿ ನಿರ್ಧರಿಸಿದೆ. ಈ ಕ್ರಮವನ್ನು ಕ್ರೀಡೆಯಲ್ಲಿನ ನೈಸರ್ಗಿಕ ಮತ್ತು ಕ್ರೀಡೆಯ ಅತಿಯಾದ ವಿಕಾಸ ಎಂದು ವಿವರಿಸಿದೆ.
ಕಳೆದ ತಿಂಗಳು ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಕ್ರಿಕೆಟ್ ಸಂವಿದಾನದಲ್ಲಿ ಬ್ಯಾಟ್ಸ್‌ಮನ್ ಬದಲಿಗೆ ಬ್ಯಾಟರ್ ಪದವನ್ನು ಬಳಸಲು ಬದಲಾವಣೆ ತಂದಿತ್ತು. ಆ ಬದಲಾವಣೆಯು ಮುಂದೆ ಎಲ್ಲಾ ಐಸಿಸಿ ಎಲ್ಲಾ ಪಂದ್ಯಗಳಲ್ಲೂ ಬಳಕೆಯಾಗಲಿದೆ.
ಕಳೆದ ನಾಲ್ಕು ವರ್ಷಗಳಲ್ಲಿ 'ಬ್ಯಾಟ್ಸ್‌ಮನ್' ಪದ ಕ್ರಿಕೆಟ್ನಿಂದ ದೂರ ಸರಿಯುತ್ತಿದೆ. ಬ್ಯಾಟರ್ ಪದವನ್ನು ನಿಯಮಿತವಾಗಿ ಕಾಮೆಂಟರಿಯಲ್ಲಿ ಮತ್ತು ವಿವಿಧ ಚಾನೆಲ್‌ಗಳಲ್ಲಿ ಬಳಸಲಾಗುತ್ತಿದೆ ಎಂದು ಐಸಿಸಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಐಸಿಸಿ ಸಿಇಒ ಜೆಫ್ ಅಲಾಡೈಸ್, ಬ್ಯಾಟ್ಸ್‌ಮನ್ ಬದಲಿಗೆ ಬ್ಯಾಟರ್ ಬಳಸಲು ಎಂಸಿಸಿ ತಂದಿರುವ ಕಾನೂನು ಐಸಿಸಿ ಸ್ವಾಗತಿಸುತ್ತದೆ ಎಂದಿದ್ದಾರೆ.
ಐಸಿಸಿ ಕೆಲವು ಸಮಯದಿಂದ ಬ್ಯಾಟರ್ ಎಂಬ ಪದವನ್ನು ನಮ್ಮ ಚಾನೆಲ್‌ಗಳಲ್ಲಿ ಮತ್ತು ಕಾಮೆಂಟರಿಯಲ್ಲಿ ಬಳಸುತ್ತಿದೆ. ಇದನ್ನು ಎಂಸಿಸಿ ಕ್ರಿಕೆಟ್ ನಿಯಮಗಳಲ್ಲಿ ಅಳವಡಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಈ ಕಾನೂನುಗಳಿಂದ ನಮ್ಮ ಎಲ್ಲ ಆಟದ ಪರಿಸ್ಥಿತಿಗಳಲ್ಲಿ ಅನುಸರಿಸುತ್ತೇವೆ ಎಂದು ಅಲ್ಲಾರ್ಡೈಸ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಇದೊಂದು ಕ್ರಿಕೆಟ್ನಲ್ಲಿನ ವಿಕಾಸ ಮತ್ತು ಇದೀಗ ನಮ್ಮ ಬ್ಯಾಟರ್ಗಳು, ಬೌಲರ್ಗಳು, ಪೀಲ್ಡರ್ಗಳು ಮತ್ತು ವಿಕೆಟ್ ಕೀಪರ್ಗಳಂತೆಯೆ ಲಿಂಗ ತಟಸ್ಥರಾಗಲಿದ್ದಾರೆ. ಇದೊಂದು ಸಣ್ಣ ಬದಲಾವಣೆಯಾದರೂ ಕ್ರಿಕೆಟ್ ನೋಡುವ ದೃಷ್ಟಿಕೋನದಲ್ಲಿ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ:ಇನ್ಮುಂದೆ ಕ್ರಿಕೆಟ್ನಲ್ಲಿ ಬ್ಯಾಟ್ಸ್‌ಮನ್ ಪದದ ಬದಲಿಗೆ 'ಬ್ಯಾಟರ್' ಬಳಸಲು MCC ಘೋಷಣೆ: ಕಾರಣವೇನು?