ಕರ್ನಾಟಕ

karnataka

ETV Bharat / sports

ICC ODI Rankings: ಗಿಲ್​, ಕಿಶನ್‌ಗೆ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಸಿಹಿ ಸುದ್ದಿ!

ICC ODI Rankings: ಐಸಿಸಿ ಏಕದಿನ ರ್‍ಯಾಂಕಿಂಗ್​ ಬಿಡುಗಡೆಯಾಗಿದೆ. ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಮಿಂಚಿದ ಯುವ ಆಟಗಾರರು ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

ICC ODI Rankings
ICC ODI Rankings

By

Published : Aug 9, 2023, 6:56 PM IST

ದುಬೈ: ವೆಸ್ಟ್​ ಇಂಡೀಸ್​ ಪ್ರವಾಸದ ಏಕದಿನ ಪಂದ್ಯಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಯುವ ಬ್ಯಾಟರ್​ಗಳು ಉತ್ತಮ ಪ್ರದರ್ಶನ ನೀಡಿದ್ದು ಐಸಿಸಿ ಶ್ರೇಯಾಂಕದಲ್ಲಿ ಚೇತರಿಕೆ ಕಂಡಿದ್ದಾರೆ. ಆರಂಭಿಕ ಆಟಗಾರರಾದ ಇಶಾನ್​ ಕಿಶನ್​ ಮತ್ತು ಶುಭಮನ್​ ಗಿಲ್​ ತಮ್ಮ ವೃತ್ತಿಜೀವನದ ಅತ್ಯುತ್ತಮ ರ್‍ಯಾಂಕಿಂಗ್ ಗಿಟ್ಟಿಸಿಕೊಂಡಿದ್ದಾರೆ.

ಗಿಲ್​ ಮತ್ತು ಕಿಶನ್​ ಜೋಡಿ 3 ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ 310 ರನ್​ ಕಲೆಹಾಕಿ ಉತ್ತಮ ಬ್ಯಾಟಿಂಗ್​ ನಿರ್ವಹಣೆ ಮಾಡಿದ್ದರು. ಈ ಬ್ಯಾಟಿಂಗ್​ನಿಂದಾಗಿ ಗಿಲ್​ ನವೀಕರಿಸಿದ ಐಸಿಸಿ ಶ್ರೇಯಾಂಕದಲ್ಲಿ ಎರಡು ಸ್ಥಾನಗಳ ಮೇಲೇರಿದ್ದು 5ನೇ ರ್‍ಯಾಂಕ್​ ಪಡೆದಿದ್ದಾರೆ. ಬಹಳ ದಿನಗಳ ಅಂತರದಲ್ಲಿ ಮತ್ತೆ ಏಕದಿನ ಪಂದ್ಯ ಆಡಿದ ಕಿಶನ್​ 9 ಸ್ಥಾನಗಳ ಏರಿಕೆ ಕಂಡಿದ್ದಾರೆ. ಇದರಿಂದಾಗಿ ಇಶಾನ್​ ಐಸಿಸಿ ಶ್ರೇಯಾಂಕದಲ್ಲಿ 36ನೇ ಸ್ಥಾನ ತಲುಪಿದ್ದಾರೆ. ವೆಸ್ಟ್​​ ಇಂಡೀಸ್​ ಪ್ರವಾಸದಲ್ಲಿ ಸ್ಟ್ಯಾಂಡ್​​ ಇನ್​ ಕ್ಯಾಪ್ಟನ್​ ಆಗಿ ಕಾರ್ಯನಿರ್ವಹಿಸಿದ ಹಾರ್ದಿಕ್​ ಪಾಂಡ್ಯ 10 ಸ್ಥಾನ ಮೇಲೇರಿ 71 ಶ್ರೇಯಾಂಕದಲ್ಲಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಏಕದಿನ ಕ್ರಿಕೆಟ್​ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಡೆರ್ ಡಸ್ಸೆನ್ ಇದ್ದರೆ, ಮೂರು ಮತ್ತು ನಾಲ್ಕರಲ್ಲಿ ಕ್ರಮವಾಗಿ ಪಾಕ್ ಬ್ಯಾಟರ್​ಗಳಾದ ಫಖರ್ ಜಮಾನ್ (755) ಮತ್ತು ಇಮಾಮ್-ಉಲ್-ಹಕ್ (745) ಇದ್ದಾರೆ. ಭಾರತದ ಟಾಪ್​ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಕ್ರಮವಾಗಿ 9 ಮತ್ತು 11ನೇ ಸ್ಥಾನದಲ್ಲಿದ್ದಾರೆ.

ವಿಂಡೀಸ್ ವಿರುದ್ಧದ ಸರಣಿಯಲ್ಲಿ ಏಳು ವಿಕೆಟ್‌ ಕಬಳಿಸಿದ ನಂತರ ಕುಲದೀಪ್ ನಾಲ್ಕು ಸ್ಥಾನ ಸುಧಾರಿಸಿಕೊಂಡು 10ನೇ ಸ್ಥಾನ ಪಡೆದರೆ, ಶಾರ್ದೂಲ್​ ಠಾಕೂರ್ ಸರಣಿಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ್ದು ಮೂರು ಸ್ಥಾನಗಳನ್ನು ಸುಧಾರಿಸಿ 30ನೇ ಸ್ಥಾನಕ್ಕೆ ಬಂದಿದ್ದಾರೆ. ಉಳಿದಂತೆ, ಸಿರಾಜ್​ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಟಿ20 ಶ್ರೇಯಾಂಕ:ಪ್ರಸ್ತುತ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಭಾರತ ಸಾಧಾರಣ ಪ್ರದರ್ಶನ ನೀಡುತ್ತಿದೆ. ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಆಟಗಾರ ತಿಲಕ್​ ವರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ಎರಡು ಪಂದ್ಯದ ಆಟದ ಪರಿಣಾಮವಾಗಿ 46ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವೆಸ್ಟ್​ ಇಂಡೀಸ್​ನ ದೈತ್ಯ ಆಟಗಾರರಾದ ನಿಕೋಲಸ್ ಪೂರನ್ ಆರು ಸ್ಥಾನ ಏರಿಕೆಕಂಡು 14ನೇ ಸ್ಥಾನ ಮತ್ತು ನಾಯಕ ರೋವ್‌ಮನ್ ಪೊವೆಲ್ 17 ಸ್ಥಾನಗಳ ಏರಿಕೆಯಿಂದ 32ನೇ ಸ್ಥಾನದಲ್ಲಿದ್ದಾರೆ.

ನಿನ್ನೆಯ ಪಂದ್ಯದಲ್ಲಿ 50 ಅಂತಾರಾಷ್ಟ್ರೀಯ ವಿಕೆಟ್​ ಪಡೆದ ಸಾಧನೆ ಮಾಡಿದ ಕುಲದೀಪ್​ ಯಾದವ್​ ಉತ್ತಮ ಏರಿಕೆ ಕಂಡಿದ್ದಾರೆ. ಮೊದಲ ಟಿ20ಯಲ್ಲಿ ಪರಿಣಾಮಕಾರಿ ಬೌಲಿಂಗ್​ ನಂತರ ಗಾಯಗೊಂಡು ಎರಡನೇ ಪಂದ್ಯ ಆಡಿರಲಿಲ್ಲ. ನಿನ್ನೆ ನಡೆದ ಪಂದ್ಯದಲ್ಲಿ ಆಡಿದ್ದ ಕುಲದೀಪ್​ 3 ವಿಕೆಟ್​ ಪಡೆದಿದ್ದರು. ಶ್ರೇಯಾಂಕ ಪಟ್ಟಿಯಲ್ಲಿ 36 ಸ್ಥಾನದ ಏರಿಕೆ ಕಂಡು 51ನೇ ರ್‍ಯಾಂಕ್​ ಹೊಂದಿದ್ದಾರೆ. ವೆಸ್ಟ್​ ಇಂಡೀಸ್​ನ ಅಲ್ಜಾರಿ ಜೋಸೆಫ್ 13ನೇ ಶ್ರೇಯಾಂಕ ಹಾಗೂ ಸ್ಪಿನ್ನರ್ ಅಕೇಲ್ ಹೊಸೈನ್ 14ನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:Nasser Hussain: ಭಾರತ ಟೆಸ್ಟ್‌ ತಂಡಕ್ಕೆ ಇಂಥ ಆಟಗಾರರು ಬೇಕೆಂದ ನಾಸೆರ್​ ಹುಸೇನ್! ಯಾರು ಗೊತ್ತೇ?​

ABOUT THE AUTHOR

...view details