ಸಿಡ್ನಿ, ಆಸ್ಟ್ರೇಲಿಯಾ:ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಹಣಾಹಣಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಟಾಸ್ ಗೆದ್ದ ಭಾರತ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ನೆಂದರ್ಲ್ಯಾಂಡ್ಸ್ ತಂಡಕ್ಕೆ ಪಂದ್ಯ ಗೆಲ್ಲಲು 180 ರನ್ಗಳನ್ನು ಗಳಿಸಬೇಕಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನೆದರ್ಲ್ಯಾಂಡ್ಸ್ ತಂಡ ಆರಂಭಿಕ ಆಘಾತ ನೀಡಿತು. ಆರಂಭಿಕ ಆಟಗಾರನಾದ ಕೆಎಲ್ ರಾಹುಲ್ 9 ರನ್ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ವಿರಾಟ್ ಕೊಹ್ಲಿ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು. ರೋಹಿತ್ ಮತ್ತು ವಿರಾಟ್ ಜೋತೆಗೂಡಿ ಬರೋಬ್ಬರಿ 73 ರನ್ಗಳನ್ನು ಕಲೆ ಹಾಕಿದರು.
ರೋಹಿತ್ ಶರ್ಮಾ ಅರ್ಧ ಶತಕ: ನಾಯಕ ರೋಹಿತ್ ಶರ್ಮಾ ನೆದರ್ಲ್ಯಾಂಡ್ಸ್ ತಂಡದ ಬೌಲರ್ಗಳನ್ನು ಬೆವರಿಳಿಸಿದರು. ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ಗಳೊಂದಿಗೆ ಕೇವಲ 39 ಎಸೆತಗಳಲ್ಲಿ 53 ರನ್ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ವಿರಾಟ್ ಕೊಹ್ಲಿಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು.
ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಇಬ್ಬರು ಸೇರಿ ನೆದರ್ಲ್ಯಾಂಡ್ಸ್ ತಂಡದ ಬೌಲರ್ಗಳನ್ನು ಬೆಂಡೆತ್ತಿದರು. ವಿಕೆಟ್ ನೀಡದೇ ಭಾರತ ತಂಡದ ಸ್ಕೋರ್ನ್ನು ಬೃಹತ್ ಮೊತ್ತಕ್ಕೆ ಏರಿಸುವಲ್ಲಿ ಸಫಲರಾದರು.
ವಿರಾಟ್ ಕೊಹ್ಲಿ ಅಮೋಘ ಅರ್ಧ ಶತಕ:ವಿರಾಟ್ ಕೊಹ್ಲಿ ಮತ್ತೆ ಫಾರ್ಮ್ಗೆ ಮರಳಿದ್ದರಿಂದ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಈ ಪಂದ್ಯದಲ್ಲೂ ವಿರಾಟ್ ಅರ್ಧ ಶತಕಗಳಿಸಿದರು. ಕೇವಲ ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಹಾಯದಿಂದ ರನ್ಗಳನ್ನು ಕಲೆ ಹಾಕಿದರು.