ಅಬುಧಾಬಿ: ಸೆಮಿಫೈನಲ್ ಪ್ರವೇಶಿಸಲು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಟಿ20ವ ವಿಶ್ವಕಪನ್ ಸೂಪರ್ 12 ಪಂದ್ಯದಲ್ಲಿ 62 ರನ್ಗಳಿಂದ ಗೆದ್ದು ಬೀಗಿದೆ.
ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 160 ರನ್ಗಳಿಸಿತ್ತು.
ಆರಂಭಿಕ ಬ್ಯಾಟರ್ಗಳಾದ ಹಜರುತುಲ್ಲಾ ಝಜೈ 27 ಎಸೆತಗಳಲ್ಲಿ 4 ಬೌಂಡರಿ , 2 ಸಿಕ್ಸರ್ಗಳ ಸಹಿತ 33, ಮೊಹಮ್ಮದ್ ಶಹ್ಜಾದ್ 33 ಎಸೆತಗಳಲ್ಲಿ 3 ಬೌಂಡರಿ , 2 ಸಿಕ್ಸರ್ಗಳ ಸಹಿತ 45, ಅಸ್ಗರ್ ಅಫ್ಘಾನ್ 23 ಎಸೆತಗಳಲ್ಲಿ 3 ಬೌಂಡರಿ , ಒಂದು ಸಿಕ್ಸರ್ ಸಹಿತ 31 ಹಾಗೂ ನಾಯಕ 17 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 32 ರನ್ಗಳಿಸಿ ಅಫ್ಘಾನ್ ತಂಡ ಎದುರಾಳಿ ನಮೀಬಿಯಾಗೆ161ರನ್ಗಳ ಕಠಿಣ ಗುರಿ ನೀಡಲು ನೆರವಾಗಿದ್ದರು.
161 ರನ್ಗಳ ಗುರಿ ಬೆನ್ನಟ್ಟಿದ ನಮೀಬಿಯಾ ತಂಡ ಅಫ್ಘಾನಿಸ್ತಾನದ ಮಾರಕ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 98 ರನ್ಗಳಿಸಿತು. ಡೇವಿಡ್ ವೀಸ್ 30 ಎಸೆತಗಳಲ್ಲಿ 26 ರನ್ಗಳಿಸಿ ತಂಡದ ಗರಿಷ್ಠ ಹಾಗೂ 20 ರ ಗಡಿದಾಟಿದ ಏಕೈಕ ಬ್ಯಾಟರ್ ಎನಿಸಿಕೊಂಡರು.