ದುಬೈ :ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸಲು ಐಸಿಸಿ ಮನಸ್ಸು ಮಾಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸುವುದಾಗಿ ಮಂಗಳವಾರ ಖಚಿತಪಡಿಸಿದೆ. ಕೆಲವು ವರ್ಷಗಳಿಂದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸುವ ವಿಚಾರವಾಗಿ ಐಸಿಸಿ ಪ್ರಯತ್ನಿಸುತ್ತಿದೆ.
ಇದೀಗ ಐಸಿಸಿ ಜೊತೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿರುವ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಬೆಂಬಲ ನೀಡಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಐಸಿಸಿ ಒಲಿಂಪಿಕ್ ವರ್ಕಿಂಗ್ ಗ್ರೂಪ್ ರಚಿಸಿದೆ. 2028ರ ಒಲಿಂಪಿಕ್ಸ್‌ನ ಭಾಗವಾಗುವ ಕುರಿತು ಕೆಲಸ ಮಾಡಲಿದೆ ಎಂದು ತಿಳಿದು ಬಂದಿದೆ.
"ಈ ಬಿಡ್‌ಗಾಗಿ ನಮ್ಮ ಕ್ರೀಡೆ ಒಗ್ಗಟ್ಟಾಗಿದೆ. ನಾವು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ದೀರ್ಘಾವಧಿಯ ಭವಿಷ್ಯದ ಭಾಗವಾಗಲು ನೋಡಲಿದ್ದೇವೆ. ಕ್ರಿಕೆಟ್‌ನಲ್ಲಿ ಇಡೀ ಪ್ರಪಂಚದಾದ್ಯಂತ ನೂರಾರು ಕೋಟಿ ಅಭಿಮಾನಿಗಳನ್ನು ಹೊಂದಿದ್ದೇವೆ. ಅದರಲ್ಲಿ ಶೇ.90ರಷ್ಟು ಮಂದಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡಲು ಬಯಸುತ್ತಿದ್ದಾರೆ" ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ಐಸಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.