ಕರ್ನಾಟಕ

karnataka

ETV Bharat / sports

Heath Streak is alive: ಜಿಂಬಾಬ್ವೆ ಕ್ರಿಕೆಟ್​ನ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನ ವದಂತಿ.. ಬದುಕಿದ್ದಾರೆ ಎಂದು ದೃಢೀಕರಿಸಿದ ಸ್ನೇಹಿತ - ಜಿಂಬಾಬ್ವೆ ಕ್ರಿಕೆಟ್​ನ ಮಾಜಿ ನಾಯಕ ಹೀತ್ ಸ್ಟ್ರೀಕ್

Henry Olonga confirms Heath Streak is alive: ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಎಕ್ಸ್​ ಆ್ಯಪ್​ನಲ್ಲಿ ಹೆನ್ರಿ ಒಲೊಂಗಾ ಹಂಚಿಕೊಂಡಿದ್ದರು, ಈಗ ಅವರೇ ಇದು ವದಂತಿ ಎಂದು ಹಳೆ ಪೋಸ್ಟ್​ನ್ನು ಡಿಲೀಟ್​ ಮಾಡಿದ್ದಾರೆ.

Henry Olonga confirms former Zimbabwe captain Heath Streak is alive
Henry Olonga confirms former Zimbabwe captain Heath Streak is alive

By ETV Bharat Karnataka Team

Published : Aug 23, 2023, 1:38 PM IST

ನವದೆಹಲಿ: ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅವರ ಸಹ ಆಟಗಾರ ಮತ್ತು ಸ್ನೇಹಿತ ಹೆನ್ರಿ ಒಲೊಂಗಾ ಅವರು ಮರಣ ಹೊಂದಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ. ಹೀತ್ ಸ್ಟ್ರೀಕ್ ಜೊತೆಗೆ ಮಾಡಿದ ವಾಟ್ಸಾಪ್ ಸಂದೇಶವನ್ನು ಎಕ್ಸ್​ ಆ್ಯಪ್ (ಹಿಂದಿನ ಟ್ವಿಟರ್​)​ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಮುಂಜಾನೆ ಹೆನ್ರಿ ಒಲೊಂಗಾ ಅವರೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನಂತರ ಅವರನ್ನು ಸಂಪರ್ಕಿಸಿ ಮಾತನಾಡಿದ ಹಳೆಯ ಪೋಸ್ಟ್​ನ್ನು ಡಿಲೀಟ್​ ಮಾಡಿ ಹೀತ್ ಸ್ಟ್ರೀಕ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಹಂಚಿಕೊಂಡು,"ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಬಹಳ ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ನಾನು ಅವನಿಂದ ಕೇಳಿದ್ದೇನೆ. ಮೂರನೇ ಅಂಪೈರ್ ಅವರನ್ನು ಮರಳಿ ಕರೆದಿದ್ದಾರೆ. ಅವರು ಜೀವಂತವಾಗಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಹೆನ್ರಿ ಒಲೊಂಗಾ ಹಂಚಿಕೊಂಡ ವಾಟ್ಸಾಪ್ ಸಂದೇಶ (ಚಿತ್ರಕೃಪೆ : ಎಎನ್​ಐ)

ಹೀತ್ ಸ್ಟ್ರೀಕ್ ಅನಾರೋಗ್ಯದಿಂದ ಬಳಲುತ್ತಿದ್ದು, ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಕೊಲೊನ್ ಮತ್ತು ಲಿವರ್ ಕ್ಯಾನ್ಸರ್​ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಸ್ನೇಹಿತರು ಮತ್ತು ಆಪ್ತ ಬಳಗ ತಿಳಿಸಿದೆ.

ಜಿಂಬಾಬ್ವೆಯ ಪತ್ರಿಕೆಯೊಂದರ ಜೊತೆ ಮಾತನಾಡಿದ ಮಾಜಿ ಆಲ್ ರೌಂಡರ್ ಹೀತ್ ಸ್ಟ್ರೀಕ್ ವಂದಂತಿಗಳೆಲ್ಲ ಸುಳ್ಳೆಂದು ತಿಳಿಸಿದ್ದಾರೆ. "ವ್ಯಕ್ತಿ ಸಾವಿನ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸದೇ ಹರಡುವುದು ತುಂಬಾ ಬೇಸರದ ಸಂಗತಿ" ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.

ಹೆನ್ರಿ ಒಲೊಂಗಾ ಅವರು ಮೊದಲು,"ಬೇಸರದ ಸುದ್ದಿ, ಹೀತ್ ಸ್ಟ್ರೀಕ್ ನಮ್ಮನ್ನು ಅಗಲಿದ್ದಾರೆ, ಆರ್​ಐಪಿ @ಹೀತ್ ಸ್ಟ್ರೀಕ್ ಲೆಂಜೆಂಡ್​​. ನಾವು ಕಂಡ ಶ್ರೇಷ್ಠ ಆಲ್ ರೌಂಡರ್. ನಿಮ್ಮೊಂದಿಗೆ ಆಟವಾಡಿರುವುದಕ್ಕೆ ಸಂತೋಷವಾಯಿತು" ಎಂದು ಬರೆದು ಪೋಸ್ಟ್​ ಹಂಚಿಕೊಂಡಿದ್ದರು. ಇದನ್ನು ಕಂಡ ಕೆಲ ಕ್ರಿಕೆಟಿಗರು ಸಂತಾಪ ವ್ಯಕ್ತಪಡಿಸಿದ್ದರು.

ಸ್ಟ್ರೀಕ್ ಜಿಂಬಾಬ್ವೆಯ ಅತ್ಯತ್ತಮ ಆಲ್​ರೌಂಡ್​ ಆಟಗಾರರಾಗಿ ಗುರುತಿಸಿಕೊಂಡವರು. 65 ಟೆಸ್ಟ್‌ಗಳು ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ ಅವರು 4933 ರನ್‌ ಮಾಡಿದ್ದಾರೆ ಮತ್ತು ಎರಡು ಮಾದರಿಯ ಕ್ರಿಕೆಟ್​ನಿಂದ 455 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟೆಸ್ಟ್‌ನಲ್ಲಿ 1000 ರನ್ ಮತ್ತು 100 ವಿಕೆಟ್‌ ಗಳಿಸಿದ ಜಿಂಬಾಬ್ವೆಯ ಮೊದಲ ಕ್ರಿಕೆಟಿಗ ಹಾಗೆಯೇ ಏಕದಿನದಲ್ಲಿ 2000 ರನ್ ಮತ್ತು 200 ವಿಕೆಟ್‌ಗಳನ್ನು ಪಡೆದ ಮೊದಲಿಗ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೇ ಜಿಂಬಾಬ್ವೆ ಪರ ಟೆಸ್ಟ್ ಮತ್ತು ಒನ್​ಡೇ ಮಾದರಿಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. (IANS​)

ಇದನ್ನೂ ಓದಿ:ಚೆಸ್‌ ವಿಶ್ವಕಪ್‌ ಫೈನಲ್‌: ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ, ನಾಳೆ 2ನೇ ಫೈಟ್​

ABOUT THE AUTHOR

...view details