ಶಾರ್ಜಾ :ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಶ್ರೀಲಂಕಾದ ವನಿಂಡು ಹಸರಂಗ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಎನಿಸಿದ್ದಾರೆ.
ಹಸರಂಗ ಶಾರ್ಜಾದಲ್ಲಿ ನಡೆಯುತ್ತಿರುವ ಸೂಪರ್ 12 ಪಂದ್ಯದಲ್ಲಿ 143 ರನ್ಗಳ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಅಫ್ರಿಕಾ ತಂಡ ಸುಲಭವಾಗಿ ಗೆಲುವು ಸಾಧಿಸುವ ಆಲೋಚನೆಯಲ್ಲಿತ್ತು.
ಆದರೆ, ಹಸರಂಗ ಹರಿಣಗಳ ಬ್ಯಾಟಿಂಗ್ ಬಲವಾಗಿದ್ದ ಐಡೆನ್ ಮಾರ್ಕ್ರಮ್ ಜೊತೆಗೆ ಉತ್ತಮವಾಗಿ ಆಡುತ್ತಿದ್ದ ನಾಯಕ ಟೆಂಬ ಬವೂಮ ಮತ್ತು ಆಲ್ರೌಂಡರ್ ಪ್ರೆಟೋರಿಯಸ್ ವಿಕೆಟ್ ಪಡೆದು ಶ್ರೀಲಂಕಾ ಕಡೆಗೆ ಪಂದ್ಯವನ್ನು ತಿರುಗಿಸಿದ್ದರು. ಆದರೆ, ರಬಾಡ ಮತ್ತು ಮಿಲ್ಲರ್ ಕೊನೆಯ 12 ಎಸೆತಗಳಲ್ಲಿ 26 ರನ್ ಸಿಡಿಸಿ ಪಂದ್ಯವನ್ನು ಲಂಕಾ ಕೈಯಿಂದ ಕಸಿದುಕೊಂಡರು.
ಹಸರಂಗ 15ನೇ ಓವರ್ನ ಕೊನೆಯ ಎಸೆತದಲ್ಲಿ 16 ರನ್ಗಳಿಸಿದ್ದ ಮಾರ್ಕ್ರಮ್ರನ್ನು ಮತ್ತು 17ನೇ ಓವರ್ನ ಮೊದಲೆರಡು ಎಸೆತಗಳಲ್ಲಿ 46 ರನ್ಗಳಿಸಿದ್ದ ಬವೂಮ ಮತ್ತು ಪ್ರೆಟೋರಿಯಸ್ರನ್ನು ವಿಕೆಟ್ ಪಡೆಯುವ ಮೂಲಕ ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧಿಸಿದ 3ನೇ ಬೌಲರ್ ಎನಿಸಿಕೊಂಡರು.