ಮೆಲಬೋರ್ನ್ : ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಜೆಮೀಮಾ ರೋಡ್ರಿಗಸ್ ಮುಂಬರುವ ಮಹಿಳೆಯರ ಬಿಗ್ಬ್ಯಾಶ್ ಟಿ20 ಲೀಗ್ನಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದಲ್ಲಿ ಆಡಲಿದ್ದಾರೆ. ಬುಧವಾರ ಈ ಇಬ್ಬರು ಆಟಗಾರ್ತಿಯರು ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
32 ವರ್ಷದ ಹರ್ಮನ್ಪ್ರೀತ್ ಭಾರತ ತಂಡದ ಜೊತೆಗೆ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಆದರೆ, ಗಾಯದ ಕಾರಣ ಏಕದಿನ ಸರಣಿ ಮತ್ತು ಏಕೈಕ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿದ್ದರು. ಸ್ಫೋಟಕ ಬ್ಯಾಟರ್ ಆಗಿರುವ ಅವರು 227 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಈ ಹಿಂದಿನ ಆವೃತ್ತಿಯಲ್ಲಿ ಸಿಡ್ನಿ ಥಂಡರ್ ತಂಡದಲ್ಲಿ ಆಡಿದ್ದರು.