ಕರ್ನಾಟಕ

karnataka

ETV Bharat / sports

ಡೆಲ್ಲಿ - ಗುಜರಾತ್​ ಮುಖಾಮುಖಿ: ಟಾಸ್ ​ಗೆದ್ದ ಸ್ನೇಹಾ ರಾಣಾ ಬ್ಯಾಟಿಂಗ್​ ಆಯ್ಕೆ

ಎರಡು ಪಂದ್ಯ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್​ ಇಂದಿನ ಗೆಲುವಿನ ನೆಚ್ಚಿನ ತಂಡ - ಬ್ಯಾಟಿಂಗ್​ನಲ್ಲಿ ಅದ್ಭುತ ಬಲ ಹೊಂದಿರುವ ಡೆಲ್ಲಿ - ಗುಜರಾತ್​ಗೆ ಎರಡನೇ ಗೆಲುವಿನ ಹಸಿವು

Gujarat Giants vs Delhi Capitals Women
ಡೆಲ್ಲಿ-ಗುಜರಾತ್​ ಮುಖಾಮುಖಿ

By

Published : Mar 11, 2023, 7:15 PM IST

ಮುಂಬೈ:ನವಿ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ವುಮೆನ್ಸ್​ ಪ್ರೀಮಿಯರ್​​ ಲೀಗ್​ನ 9ನೇ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗುತ್ತಿದ್ದು, ಟಾಸ್​ ಗೆದ್ದ ರಾಣಾ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ರಾಣಾ ತಂಡದಲ್ಲಿ ಎರಡು ಬದಲಾವಣೆ ಮಾಡಿದ್ದು, ಲಾರಾ ಮತ್ತು ಜಾರ್ಜಿಯಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​​ ಒಂದು ಬದಲಾವಣೆ ಲಾರಾ ಹ್ಯಾರಿಸ್ ಪಡೆಗೆ ನೂತನ ಸೇರ್ಪಡೆಯಾಗಿದ್ದಾರೆ.

ಗುಜರಾತ್ ಜೈಂಟ್ಸ್ ಆಡುವ ತಂಡ : ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್​), ದಯಾಲನ್ ಹೇಮಲತಾ, ಸ್ನೇಹ ರಾಣಾ (ನಾಯಕಿ), ಕಿಮ್ ಗಾರ್ತ್, ಮಾನ್ಸಿ ಜೋಶಿ, ತನುಜಾ ಕನ್ವರ್

ಡೆಲ್ಲಿ ಕ್ಯಾಪಿಟಲ್ಸ್​ ಆಡುವ ತಂಡ:ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಲಾರಾ ಹ್ಯಾರಿಸ್, ಮರಿಝನ್ನೆ ಕಪ್, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್​), ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ, ತಾರಾ ನಾರ್ರಿಸ್

ಗುಜರಾತ್ ಜೈಂಟ್ಸ್ ತನ್ನ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಥ್ರಿಲ್ಲಿಂಗ್​ ಗೆಲುವು ಸಾಧಿಸಿತ್ತು. ಲೀಗ್​ನಲ್ಲಿ ಸತತ ಎರಡು ಸೋಲು ಕಂಡಿದ್ದ ಗುಜರಾತ್​ಗೆ ಈ ಗೆಲುವು ಬಲ ತಂದಿದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಲೀಗ್​ನ ಮೊದಲ ಸೋಲನ್ನು ಅನುಭವಿಸಿತು. ಎರಡೂ ತಂಡಗಳು ಇಂದಿನ ಪಂದ್ಯದ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಪಾಯಿಂಟ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಹವಣಿಸುತ್ತಿದೆ.

ಗುಜರಾತ್​ನಿಂದ ಬೆತ್​ ಮೂನಿ ಔಟ್​:ಆಸ್ಟ್ರೇಲಿಯನ್​ ಆಟಗಾರ್ತಿ ಬೆತ್​ ಮೂನಿ ಅವರನ್ನು ಗುಜರಾತ್​ ತಂಡದ ನಾಯಕಿಯಾಗಿ ಘೋಷಿಸಲಾಗಿತ್ತು. ಆದರೆ, ಗಾಯದ ಸಮಸ್ಯೆಯಿಂದ ಗುಜರಾತ್​ ಪಡೆಯ ಸಾರಥ್ಯವನ್ನು ಸ್ನೇಹಾ ರಾಣಾಗೆ ವಹಿಸಿಕೊಡಲಾಗಿತ್ತು. ಮೂನಿ ಚೇತರಿಕೆ ಕಾಣದ ಹಿನ್ನೆಲೆ ಇಡೀ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಸ್ನೇಹಾ ರಾಣಾರ ನಾಯಕತ್ವವನ್ನು ತಂಡ ಮುಂದುವರೆಸಿದೆ.

ಆರ್​ಸಿಬಿ ಮೇಲೆ ಗೆದ್ದಿರುವ ರಾಣಾ ಪಡೆ:ಬೆತ್​ ಮೂನಿ ಅವರು ಗಾಯದ ಕಾರಣ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು. ಮೊದಲೆರಡು ಪಂದ್ಯದಲ್ಲಿ ಸೋಲು ಕಂಡಿದ್ದ ಗುಜರಾತ್ ಆರ್​ಸಿಬಿ ಮುಂದೆ ಗೆಲುವು ಕಂಡಿತು. ಆದರೆ, ಆರ್​ಸಿಬಿ ಸತತ ಮೂರು ಪಂದ್ಯಗಳಲ್ಲಿ ಸೋತಿರುವ ಕಾರಣ ಪ್ರಬಲ ತಂಡದ ಎದುರಿನ ಗೆಲುವು ಗುಜರಾತ್​ಗೆ ಸಿಕ್ಕಿಲ್ಲ.

ಬಲಿಷ್ಠ ತಂಡ ಡೆಲ್ಲಿ:ಡೆಲ್ಲಿ ಕ್ಯಾಪಿಟಲ್ಸ್​ ಬಲಿಷ್ಠ ತಂಡವಾಗಿದೆ. ಮುಂಬೈ ಇಂಡಿಯನ್ಸ್​ ವಿರುದ್ಧ ಕೊನೆಯ ಪಂದ್ಯದಲ್ಲಿ ಸೋತಿದ್ದು ಬಿಟ್ಟರೆ ಲೀಗ್​ನ ಎರಡು ಪಂದ್ಯದಲ್ಲು ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆರ್​ಸಿಬಿ ಎದುರು 223 ರನ್​ ಗಳಿಸಿ ಮಹಿಳಾ ಟಿ20 ಕ್ರಿಕೆಟ್​ನ ಎರಡನೇ ಬೃಹತ್​ ರನ್​ ಗಳಿಸಿತ್ತು. ಎರಡನೇ ಪಂದ್ಯದಲ್ಲೂ 42 ರನ್​ ಅಂತರದ ಗೆಲುವನ್ನು ಯುಪಿ ವಾರಿಯರ್ಸ್​ ಮೇಲೆ ಸಾಧಿಸಿತ್ತು. ಆದರೆ, ಮುಂಬೈ ಎದುರು ಅಲ್ಪ ಮೊತ್ತಕ್ಕೆ ಕುಸಿದ ಡೆಲ್ಲಿ 8 ವಿಕೆಟ್​ಗಳ ಸೋಲು ಕಂಡಿತ್ತು.

ಇದನ್ನೂ ಓದಿ:ಲೀಗ್​ನಲ್ಲಿ ಉಳಿಯಲು ಆರ್​ಸಿಬಿಗೆ ಗೆಲುವು ಅನಿವಾರ್ಯ, ಟಾಸ್​ ಗೆದ್ದ ಮಂಧಾನ ಬ್ಯಾಟಿಂಗ್​ ಆಯ್ಕೆ

ABOUT THE AUTHOR

...view details