ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ ಈ ಎರಡು ತಂಡಗಳ ನಡುವಿನ ಕದನ ಭಾರತ-ಪಾಕಿಸ್ತಾನ ಪಂದ್ಯವಿದ್ದಂತೆ: ಹರ್ಭಜನ್ ಸಿಂಗ್ - ಇಂಡಿಯನ್ ಪ್ರೀಮಿಯರ್ ಲೀಗ್

ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಮತ್ತು ಚೆನ್ನೈ ತಂಡಗಳು 2022ರ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಎಲ್ಲಾ ವಿಭಾಗದಲ್ಲೂ ಸಂಪೂರ್ಣ ವಿಫಲವಾಗಿವೆ. ಮುಂಬೈ ಕೊನೆಯ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್​ ಚೆನ್ನೈ 9ನೇ ಸ್ಥಾನದಲ್ಲಿದೆ.

Harbhajan Singh On CSK vs MI
ಹರ್ಭಜನ್ ಸಿಂಗ್

By

Published : Apr 21, 2022, 8:37 PM IST

ಮುಂಬೈ:ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯ ಮುಂಬೈನ ಡಿ.ವೈ ಪಾಟೀಲ್‌ ಸ್ಟೇಡಿಂಯನಲ್ಲಿ ನಡೆಯುತ್ತಿದೆ. ಈ ಎರಡೂ ತಂಡಗಳನ್ನು ಪ್ರತಿನಿಧಿಸಿರುವ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್, ಪಂದ್ಯವನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಹೋಲಿಕೆ ಮಾಡಿದ್ದಾರೆ.

ಐಪಿಎಲ್​ನ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಮತ್ತು ಚೆನ್ನೈ ತಂಡಗಳು 2022ರ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಎಲ್ಲಾ ವಿಭಾಗದಲ್ಲೂ ಸಂಪೂರ್ಣ ವಿಫಲವಾಗಿವೆ. ಮುಂಬೈ ಕೊನೆಯ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್​ ಚೆನ್ನೈ 9ನೇ ಸ್ಥಾನದಲ್ಲಿದೆ.

ಸ್ಟಾರ್​ ಸ್ಫೋರ್ಟ್ಸ್​ ಲೈವ್ ಕಾರ್ಯಕ್ರಮದ ಸಂವಾದದ ವೇಳೆ, 10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್​ನಲ್ಲಿ ಕುಳಿತಿದ್ದ ನನಗೆ, ಮೊದಲ ಬಾರಿಗೆ ಸಿಎಸ್​ಕೆ ಜರ್ಸಿ ತೊಟ್ಟ ಸಂದರ್ಭದಲ್ಲಿ ತುಂಬಾ ವಿಚಿತ್ರವೆನಿಸಿತ್ತು. ನನಗೆ ಎರಡೂ ತಂಡಗಳೂ ತುಂಬಾ ವಿಶೇಷ. ಈ ಎರಡು ಐಪಿಎಲ್ ದೈತ್ಯ ತಂಡಗಳ ನಡುವಿನ ಪಂದ್ಯವು ಪೈಪೋಟಿ ಅಂಶ ಮತ್ತು ಸ್ಪರ್ಧೆಯ ಮಟ್ಟದಿಂದಾಗಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಭಾವನೆಯನ್ನು ನೀಡುತ್ತವೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

ನಾನು ಮುಂಬೈ ವಿರುದ್ಧದ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿದಾಗ, ಈ ಪಂದ್ಯ ಬೇಗ ಮುಕ್ತಾಯವಾಗಲಿ ಎಂದು ಪ್ರಾರ್ಥಿಸುತ್ತಿದ್ದೆ, ಏಕೆಂದರೆ ಆ ಪಂದ್ಯದ ಭಾವನಾತ್ಮ ಮತ್ತು ಸಾಕಷ್ಟು ಒತ್ತಡದಿಂದ ಕೂಡಿತ್ತು. ಅದೃಷ್ಟವಶಾತ್ ಆ ಪಂದ್ಯವನ್ನು ನಾವು ಬೇಗ ಗೆದ್ದುಕೊಂಡೆವು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಪೃಥ್ವಿ ಶಾ ಭೀತಿ, ಸ್ವಾರ್ಥವಿಲ್ಲದ ಆಡುವ ಅಮೂಲ್ಯ ಆಟಗಾರ: ಸಂಜಯ್ ಮಂಜ್ರೇಕರ್

ABOUT THE AUTHOR

...view details