ಕರ್ನಾಟಕ

karnataka

ETV Bharat / sports

ಭಾರತದ ಪರ ಆಡುವುದಿಲ್ಲ ಎಂಬುದು ನೆನಪಾದಾಗಲೆಲ್ಲ ಭಾವುಕನಾಗುತ್ತಿರುವೆ : ಉನ್ಮುಕ್ತ್​​ ಚಾಂದ್​

ಅಮೆರಿಕಾದ ಮೈನರ್ ಕ್ರಿಕೆಟ್​ ಲೀಗ್​ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದಲ್ಲಿ ಆಡಲಿದ್ದಾರೆ. ಶನಿವಾರದಿಂದ ಆರಂಭವಾಗಲಿರುವ ಈ ಲೀಗ್​ನಲ್ಲಿ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಸ್ತುತ ಆಟಗಾರನಾಗಿ ಮತ್ತು ಮುಂದೆ ಯುವ ಕ್ರಿಕೆಟಿಗರಿಗೆ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಟೂರ್ನಮೆಂಟ್​ನಲ್ಲಿ ಅಮೆರಿಕಾದ 27 ಪ್ರಮುಖ ನಗರಗಳ ತಂಡಗಳು ಭಾಗವಹಿಸುತ್ತಿವೆ. 26 ಸ್ಥಳಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಕ್ರಿಕೆಟಿಗರು 200ಕ್ಕೂ ಹೆಚ್ಚು ಪಂದ್ಯಗಳನ್ನಾಡಲಿವೆ..

ಉನ್ಮುಕ್ತ್​ ಚಾಂದ್​ ನಿವೃತ್ತಿ
ಉನ್ಮುಕ್ತ್​ ಚಾಂದ್​ ನಿವೃತ್ತಿ

By

Published : Aug 14, 2021, 6:16 PM IST

ನವದೆಹಲಿ :ಮುಂದೆಂದೂ ಭಾರತ ತಂಡಕ್ಕಾಗಿ ಆಡಲಾಗುವುದಿಲ್ಲ ಎನ್ನುವುದನ್ನು ಊಹಿಸಿದರೆ ನಾನು ಭಾವುಕನಾಗುತ್ತೇನೆ ಅಂತಾ ಕ್ರಿಕೆಟಿಗಉನ್ಮುಕ್ತ್ ಚಾಂದ್ ಹೇಳಿದ್ದಾರೆ. ಭಾರತಕ್ಕೆ ಅಂಡರ್-19 ವಿಶ್ವಕಪ್​ ಗೆಲ್ಲಿಸಿಕೊಟ್ಟ ಹೀರೊ ಆಗಿರುವ ಉನ್ಮುಕ್ತ್‌ ಚಾಂದ್‌,ಅವಕಾಶಗಳ ಕೊರತೆಯಿಂದಾಗಿ ಬೇಸರಗೊಂಡು ಕೇವಲ 28ನೇ ವರ್ಷಕ್ಕೆ ನಿವೃತ್ತಿ ಘೋಷಿಸಿದ್ದಾರೆ.

2012ರ ಅಂಡರ್​-19 ವಿಶ್ವಕಪ್​ನಲ್ಲಿ ನಾಯಕನಾಗಿ ಭಾರತಕ್ಕೆ 3ನೇ ಬಾರಿ ಪ್ರಶಸ್ತಿ ತಂದುಕೊಟ್ಟಿದ್ದರು. ಅಂದೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದ ಈ ಯುವ ಆಟಗಾರ ಕೊಕೊಕೋಲಾದಂತ ದೊಡ್ಡಮಲ್ಟಿ ನ್ಯಾಷನಲ್‌ ಕಂಪನಿ ರಾಯಭಾರಿಯಾಗಿ ಆಯ್ಕೆಯಾಗಿದ್ದರು.

ಆ ಸಂದರ್ಭದಲ್ಲಿ ಈತನನ್ನು ಧೋನಿ, ವಿರಾಟ್​ ಕೊಹ್ಲಿಯಂತೆ ಭಾರತ ಕ್ರಿಕೆಟ್‌ನಲ್ಲಿ ಮಹಾನ್ ಆಟಗಾರನಾಗಬಹುದು ಎಂದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ, ದುರಾದೃಷ್ಟವಶಾತ್​ ಭಾರತದಲ್ಲಿ ಆತನ ಕ್ರಿಕೆಟ್ ಪಯಣ ಕೇವಲ 28 ವರ್ಷಗಳಿಗೆ ಅಂತ್ಯವಾಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಸ್ವತಃ ಚಾಂದ್​ ಕೂಡ.

ದೇಶಿ ತಂಡದಲ್ಲೂ ಅವಕಾಶ ಸಿಗುತ್ತಿಲ್ಲ, ಐಪಿಎಲ್​ನಲ್ಲಿ ಕೆಲವು ವರ್ಷಗಳಲ್ಲಿ ಅವಕಾಶ ಸಿಕ್ಕರೂ ಉತ್ತಮ ಪ್ರದರ್ಶನ ತೋರದ ಕಾರಣ, ಆತ 2011ರಿಂದ 2016ರವರೆಗೆ ಶ್ರೀಮಂತ ಲೀಗ್​ನಲ್ಲಿ ಆಡಿದ್ದು ಕೇವಲ 21 ಪಂದ್ಯಗಳಲ್ಲಿ ಮಾತ್ರ. ಅದರಲ್ಲಿ ಗಳಿಸಿದ್ದು 300 ರನ್​! ನಂತರ ಸತತ 5 ವರ್ಷಗಳ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಆತನನ್ನ ಖರೀದಿಸಲು ಮನಸ್ಸು ಮಾಡಲಿಲ್ಲ.

ಜೊತೆಗೆ ಲಿಸ್ಟ್​ ಎ ಕ್ರಿಕೆಟ್​ನಲ್ಲಿ ಮಾತ್ರ ಸ್ಥಿರ ಪ್ರದರ್ಶನ ತೋರುತ್ತಿದ್ದ ಚಾಂದ್​ಗೆ ದೆಹಲಿ ರಣಜಿ ತಂಡದಲ್ಲಿ ಅವಕಾಶ ಸಿಗಲಿಲ್ಲ. ನಂತರ ಉತ್ತರಾಖಂಡಕ್ಕೆ ವರ್ಗಾಯಿಸಿಕೊಂಡಿದ್ದರು. ಇದೀಗ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಮೆರಿಕಾಗೆ ಪಯಣ ಬೆಳೆಸಿದ್ದಾರೆ.

ಉನ್ಮುಕ್ತ್​ ಚಾಂದ್​ ನಿವೃತ್ತಿ

ಉಳಿದಿರುವ ಆರೇಳು ವರ್ಷಗಳನ್ನು ಇಲ್ಲೇ ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವ ಬದಲು ಯುವ ಕ್ರಿಕೆಟಿಗರಿಗೆ ಮುಕ್ತ ಅವಕಾಶ ನೀಡಿರುವ ಅಮೆರಿಕಾದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸುವ ದೃಢ ನಿರ್ಧಾರ ಕೈಗೊಂಡು ಆಗಸ್ಟ್​ 13 ಶುಕ್ರವಾರ ಭಾರತ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಆದರೆ, ಸ್ವಂತ ದೇಶಕ್ಕೆ ಆಡದಿರುವುದು ಮತ್ತು ಭಾರತದಂತಹ ಪ್ರಬಲ ಕ್ರಿಕೆಟ್​ ಮಂಡಳಿ ತ್ಯಜಿಸಿ ಬೇರೊಂದು ರಾಷ್ಟ್ರದ ಪರ ಆಡುವುದೆಂದರೆ ಎಂಥವರಿಗೂ ಸಾಧಾರಣ ಮಾತಲ್ಲ. ಇದನ್ನೇ ಚಾಂದ್​ ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದು, ಭಾರತದ ಪರ ಇನ್ನೆಂದೂ ನಾನು ಆಡುವುದಿಲ್ಲ ಎಂದು ನೆನೆದರೆ ಸಾಕು, ನನ್ನ ಕಣ್ಣಲ್ಲಿ ನೀರು ಉಕ್ಕುತ್ತಿದೆ ಎಂದು ಹೇಳಿಕೊಂಡಿದ್ದಾರೆ.

"ನನಗೆ ಕಳೆದ ಕೆಲವು ವರ್ಷಗಳು ಕಠಿಣವಾಗಿದ್ದವು. ಆದರೆ, ನಾನು ಕ್ರಿಕೆಟ್ ಅನ್ನು ಸಂಪೂರ್ಣವಾಗಿ ಬಿಟ್ಟು ಕೊಡುವುದಿಲ್ಲ. ಭಾರತದಲ್ಲಿ ಆಡಲು ಸೂಕ್ತ ಅವಕಾಶಗಳನ್ನು ಪಡೆಯದಿದ್ದರೆ, ನನ್ನ ವೃತ್ತಿಜೀವನದ ಮುಂದಿನ ನಾಲ್ಕು ಅಥವಾ ಐದು ನಿರ್ಣಾಯಕ ವರ್ಷಗಳು ವ್ಯರ್ಥವಾಗಲಿವೆ.

ನಾನು ಮತ್ತೆ ಭಾರತಕ್ಕಾಗಿ ಆಡಲು ಬರುವುದಿಲ್ಲ ಎಂಬುದನ್ನು ಭಾವನಾತ್ಮಕವಾಗಿ ಪರಿಗಣಿಸುತ್ತೇನೆ. ಆದರೆ, ಇಲ್ಲಿ ಕ್ರಿಕೆಟ್​ ಆಡಿರುವ ಕೆಲವು ವಿಶೇಷ ನೆನಪುಗಳು ನನ್ನಲ್ಲಿ ದೀರ್ಘಕಾಲ ಉಳಿಯಲಿವೆ" ಎಂದಿದ್ದಾರೆ.

ಅಮೆರಿಕಾದ ಮೈನರ್ ಕ್ರಿಕೆಟ್​ ಲೀಗ್​ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದಲ್ಲಿ ಆಡಲಿದ್ದಾರೆ. ಶನಿವಾರದಿಂದ ಆರಂಭವಾಗಲಿರುವ ಈ ಲೀಗ್​ನಲ್ಲಿ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಸ್ತುತ ಆಟಗಾರನಾಗಿ ಮತ್ತು ಮುಂದೆ ಯುವ ಕ್ರಿಕೆಟಿಗರಿಗೆ ಕೋಚ್​ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಟೂರ್ನಮೆಂಟ್​ನಲ್ಲಿ ಅಮೆರಿಕಾದ 27 ಪ್ರಮುಖ ನಗರಗಳ ತಂಡಗಳು ಭಾಗವಹಿಸುತ್ತಿವೆ. 26 ಸ್ಥಳಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಕ್ರಿಕೆಟಿಗರು 200ಕ್ಕೂ ಹೆಚ್ಚು ಪಂದ್ಯಗಳನ್ನಾಡಲಿವೆ.

ಇದನ್ನು ಓದಿ:ಅಮೆರಿಕದ ಕ್ರಿಕೆಟ್ ಲೀಗ್​​ನೊಂದಿಗೆ ಮಾಜಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್​ ಒಪ್ಪಂದ

ABOUT THE AUTHOR

...view details