ನಾಟಿಂಗ್ಹ್ಯಾಮ್:ಟ್ರೆಂಟ್ಬ್ರಿಡ್ಜ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಡಕ್ ಔಟ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 'ಗೋಲ್ಡನ್ ಡಕ್'ಗೆ ನೆಟ್ಟಿಗರು ತಹರೇವಾರಿ ಪೋಸ್ಟ್ ಮೂಲಕ ವಿರಾಟ್ ಕಾಲೆಳೆದಿದ್ದಾರೆ.
ಭಾರತ ತಂಡವು ಪೂಜಾರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ, ಕ್ರೀಸ್ ಬಂದ ಕೊಹ್ಲಿ ಆ್ಯಂಡರ್ಸನ್ ಎಸೆದ ಹೊರ ಹೋಗುತ್ತಿದ್ದ ಬೌಲ್ ಆಡುವ ಪ್ರಯತ್ನದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ 'ಗೋಲ್ಡನ್ ಡಕ್'ಗೆ ಪೆವಿಲಿಯನ್ಗೆ ಮರಳಿದ್ದರು. ವಿರಾಟ್ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಇದು ಬೇಸರ ತರಿಸಿದೆ.
ಬಳಿಕ ಕೊಹ್ಲಿಯ ಗೋಲ್ಡನ್ ಡಕ್ ಔಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಗುರಿಯಾಗಿದೆ. 'ಕೊನೆಗೂ ಭಾರತಕ್ಕೆ ಗೋಲ್ಡ್ ಸಿಕ್ಕಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಗೋಲ್ಡ್ ಪದಕ ಸಿಗದಿದ್ದರೂ, ಕೊಹ್ಲಿ ಅದನ್ನು ಪಡೆದಿದ್ದಾರೆ' ಎಂದು ಟೀಕಿಸಿದ್ದಾರೆ. ಅಲ್ಲದೆ, ಗೋಲ್ಡನ್ ಅಂದರೇನು ಅಂತ ಗೊತ್ತಿರಲಿಲ್ಲ, ತಿಳಿಸಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್' ಎಂದು ಕೂಡ ಟ್ವೀಟ್ ಮಾಡಿದ್ದಾರೆ.