ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನ ಗಬ್ಬಾದಲ್ಲಿ ಅಜೇಯ 89 ರನ್ಗಳಿಸಿ ಐತಿಹಾಸಿಕ ಟೆಸ್ಟ್ ಸರಣಿ ಜಯಕ್ಕೆ ಕಾರಣವಾಗಿದದ ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರಿಗೆ ಇಎಸ್‌ಪಿಎನ್ ಕ್ರಿಕ್‌ಇನ್ಫೋದ ಟಾಪ್ 'ಟೆಸ್ಟ್ ಬ್ಯಾಟಿಂಗ್' ಪ್ರಶಸ್ತಿ ಪಡೆದುಕೊಂಡಿದ್ದಾರೆ.
ESPNನ 15ನೇ ವಾರ್ಷಿಕೋತ್ಸವದ ನಿಮಿತ್ತ ವಿಶ್ವವಿಖ್ಯಾತ ಕ್ರಿಕೆಟ್ ವೆಬ್ಸೈಟ್ ಈ ಪ್ರಶಸ್ತಿಯನ್ನು ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ 'ವರ್ಷದ ನಾಯಕ' ಪ್ರಶಸ್ತಿಯನ್ನು ನೀಡಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತದ ವಿರುದ್ಧ 31 ರನ್ ನೀಡಿ 5 ವಿಕೆಟ್ ಪಡೆದು ನ್ಯೂಜಿಲ್ಯಾಂಡ್ಗೆ ಮೊದಲ ಆವೃತ್ತಿಯ ಪ್ರಶಸ್ತಿ ತಂದುಕೊಟ್ಟ ವೇಗಿ ಕೈಲ್ ಜೇಮಿಸನ್ಗೆ ವರ್ಷದ ಟೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲ್ಲಿ ರಾಬಿನ್ಸನ್ ಅವರಿಗೆ ವರ್ಷದ ಪದಾರ್ಪಣೆ ಆಟಗಾರ ಪ್ರಶಸ್ತಿಗೆ ಪಡೆದುಕೊಂಡಿದ್ದಾರೆ. ಅವರು 2021ರಲ್ಲಿ ಒಟ್ಟು 37 ವಿಕೆಟ್ ಪಡೆದಿದ್ದರು. ಟಿ-20 ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧದ ಲೀಗ್ ಪಂದ್ಯಲ್ಲಿ 67 ಎಸೆತಗಳಲ್ಲಿ ಶತಕ ಸಿಡಿಸಿದ್ದ ಜೊಸ್ ಬಟ್ಲರ್ 'ಟಿ20 ಬ್ಯಾಟಿಂಗ್ ಪ್ರಶಸ್ತಿ' ಮತ್ತು ಸಕೀದ್ ಮೊಹಮ್ಮದ್ ಏಕದಿನ ಬೌಲಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಏಕದಿನ ಬ್ಯಾಟಿಂಗ್ ಮತ್ತು ಟಿ-20 ಬೌಲಿಂಗ್ ಪ್ರಶಸ್ತಿಗಳು ಪಾಕಿಸ್ತಾನ ಪಾಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ 155 ಎಸೆತಗಳಲ್ಲಿ 193 ರನ್ಗಳಿಸಿದ್ದ ಫಖರ್ ಜಮಾನ್ ಏಕದಿನ ಬ್ಯಾಟರ್, ಭಾರತದ ವಿರುದ್ಧ ಟಿ-20 ವಿಶ್ವಕಪ್ನಲ್ಲಿ 3 ವಿಕೆಟ್ ಪಡೆದು 10 ವಿಕೆಟ್ ಜಯಕ್ಕೆ ಕಾರಣರಾಗಿದ್ದ ಶಾಹೀನ್ ಅಫ್ರಿದಿಗೆ ಟಿ20 ಬೌಲಿಂಗ್ ಪ್ರಶಸ್ತಿ ಗೆದ್ದಿದ್ದಾರೆ.
ಈ ಪ್ರಶಸ್ತಿಯನ್ನು ಇಎಸ್ಪಿನ್ ಕ್ರಿಕ್‌ಇನ್ಫೋದ ಹಿರಿಯ ಸಂಪಾದಕರು ಮತ್ತು ಬರಹಗಾರರು ಹಾಗೂ ಮಾಜಿ ಕ್ರಿಕೆಟಿಗರಾದ ಡೇನಿಯಲ್ ವಿಟೋರಿ, ಇಯಾನ್ ಬಿಷಪ್, ಟಾಮ್ ಮೂಡಿ, ಅಜಿತ್ ಅಗರ್ಕರ್, ,ಲಿಸಾ ಸ್ಥಾಲೇಕರ್, ಡೆರಿಲ್ ಕ್ಯುಲಿನನ್, ರಸೆಲ್ ಅರ್ನಾಲ್ಡ್, ಡರೇನ್ ಗಂಗಾ, ಶಹ್ರಿಯರ್ ನಫೀಸ್, ಬಾಜೀದ್ ಖಾನ್ ಮತ್ತು ಮಾರ್ಕ್ ನಿಕೋಲಸ್ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದದ್ದು ನನ್ನ ನಿರ್ಧಾರಗಳಿಂದ, ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಾರೆ: ರಹಾನೆ ಕಿಡಿ