ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾದ ಸಾಮರ್ಥ್ಯದ ಬಗ್ಗೆ ಮತ್ತೆ ಮೈಕಲ್ ವಾನ್‌ ಕ್ಯಾತೆ! - michael vaughan reactions

"ಮಳೆಯಿಂದಾಗಿ ಇಂದು ಟೀಂ ಇಂಡಿಯಾ ಬಚಾವಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಮಾಡಿಕೊಂಡಿದ್ದಾರೆ. ಈ ಟ್ವೀಟ್​ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಟೀಂ ಇಂಡಿಯಾ ತಂಡದ ಬಗ್ಗೆ ಮೈಕಲ್ ವಾನ್‌ ಈತರದ ಹೇಳಿಕೆ (ಟ್ವೀಟ್​) ನೀಡುವುದು ಇದೇ ಮೊದಲಲ್ಲ..

wtc final 2021; india have been saved by weather; michael vaughan tweet
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್‌

By

Published : Jun 18, 2021, 10:19 PM IST

Updated : Jun 18, 2021, 10:35 PM IST

ಹೊಸದಿಲ್ಲಿ :ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್‌ ಟ್ವೀಟ್​ ಮಾಡುವ ಮೂಲಕ ಟೀಂ ಇಂಡಿಯಾಗೆ ಪರೋಕ್ಷವಾಗಿ ಅಪಹಾಸ್ಯ ಮಾಡಿದ್ದಾರೆ. ಈ ಟ್ವೀಟ್​​ ಟೀಂ ಇಂಡಿಯಾದ ಅಭಿಮಾನಿಗಳ ಕೈಸೇರುತ್ತಿದ್ದಂತೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಹಲವರು ಪ್ರತಿಯಾಗಿ ಅತಿರೇಕದ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: WTC ಫೈನಲ್​: ಅಗತ್ಯವೆನಿಸಿದ್ರೆ ಮೀಸಲು ದಿನದಂದು ಕ್ರಿಕೆಟ್​​ ಪಂದ್ಯ

ಸೌತಾಂಪ್ಟನ್​ನಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವೆ ಇಂದು ನಡೆಯಬೆಕಿದ್ದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ದಿನದಾಟವು ಅಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ರದ್ದಾಗಿದೆ. ಅದನ್ನೇ ಕಾರಣವನ್ನಾಗಿಟ್ಟುಕೊಂಡು ಟೀಂ ಇಂಡಿಯಾಗೆ ಅಪಹಾಸ್ಯ ಮಾಡಿದ್ದಾರೆ. ಮಳೆಯಿಂದ ಪಂದ್ಯದ ಮೊದಲ ದಿನದಾಟವನ್ನು ರದ್ದು ಮಾಡುತ್ತಿದ್ದಂತೆ ವಾನ್‌ ಹೀಗೆ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

"ಮಳೆಯಿಂದಾಗಿ ಇಂದು ಟೀಂ ಇಂಡಿಯಾ ಬಚಾವಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್​ ಮಾಡಿಕೊಂಡಿದ್ದಾರೆ. ಈ ಟ್ವೀಟ್​ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಟೀಂ ಇಂಡಿಯಾ ತಂಡದ ಬಗ್ಗೆ ಮೈಕಲ್ ವಾನ್‌ ಈತರದ ಹೇಳಿಕೆ (ಟ್ವೀಟ್​) ನೀಡುವುದು ಇದೇ ಮೊದಲಲ್ಲ.

Last Updated : Jun 18, 2021, 10:35 PM IST

ABOUT THE AUTHOR

...view details