ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ವಿರುದ್ಧದ ಟಿ -20 ಸರಣಿ ನಂತರ ನಮಗೆ ಟಿ-20 ವಿಶ್ವಕಪ್ ಆಡಲು ಬಲಿಷ್ಠ ತಂಡ ಸಿಗಲಿದೆ: ರಾಥೋರ್

ಶುಕ್ರವಾರದಿಂದ ಭಾರತ ಮತ್ತು ಇಂಗ್ಲೆಂಡ್ ಟಿ-20 ಸರಣಿ ಆರಂಭವಾಗಲಿದೆ. ಎಲ್ಲಾ ಐದು ಟಿ-20 ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಟೀಮ್​ ಇಂಡಿಯಾ
ಟೀಮ್​ ಇಂಡಿಯಾ

By

Published : Mar 10, 2021, 2:21 PM IST

Updated : Mar 10, 2021, 3:03 PM IST

ಅಹಮದಾಬಾದ್: ಟಿ-20 ವಿಶ್ವಕಪ್ 2021 ಗೆ ಇನ್ನೂ ಕೇಲವೆ ದಿನಗಳು ಬಾಕಿ ಉಳಿದಿದ್ದು, ಪ್ರಸ್ತುತ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿ ಆಡಲು ಸಜ್ಜಾಗುತ್ತಿದ್ದು, ಟಿ-20 ವಿಶ್ವಕಪ್ ಗೆ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್​ ಇಂಡಿಯಾ ಬಲಿಷ್ಠ ತಂಡವನ್ನ ಕಣಕ್ಕಿಳಿಸಲಿದೆ ಎಂದು ಟೀಮ್​ ಇಂಡಿಯಾ ಬ್ಯಾಟಿಂಗ್ ಕೋಚ್​ ವಿಕ್ರಮ್ ರಾಥೋರ್ ಹೇಳಿದ್ದಾರೆ.

ಶುಕ್ರವಾರದಿಂದ ಭಾರತ ಮತ್ತು ಇಂಗ್ಲೆಂಡ್ ಟಿ-20 ಸರಣಿ ಆರಂಭವಾಗಲಿದೆ. ಎಲ್ಲ ಐದು ಟಿ-20 ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಟಿ-20 ವಿಶ್ವಕಪ್ ಭಾರತದಲ್ಲಿ ಈ ವರ್ಷ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ.

ಓದಿ : ಫಿಟ್​ನೆಸ್​ ಪರೀಕ್ಷೆ ಫೇಲ್​ : ಟಿ-20 ಸರಣಿಯಿಂದ ವರುಣ್ ಚಕ್ರವರ್ತಿ ಔಟ್

"ಟಿ 20 ವಿಶ್ವಕಪ್ ಭಾರತದಲ್ಲಿದೆ, ಆದ್ದರಿಂದ ಬ್ಯಾಟಿಂಗ್ ಘಟಕವು ಮೂಲತಃ ನೆಲೆಗೊಳ್ಳಬೇಕೆಂದು ನಾನು ಬಯಸುತ್ತೇನೆ. ನಾವು ಈ ಸರಣಿಯನ್ನು ಮುಗಿಸುವ ಹೊತ್ತಿಗೆ, 'ಇದು ವಿಶ್ವಕಪ್ ಆಡಲು ಹೊರಟಿರುವ ತಂಡ' ಎಂದು ನಾವು ತಿಳಿದುಕೊಳ್ಳಬೇಕು. ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ ಎಂದು ನನಗೆ ಈಗಾಗಲೇ ಖಚಿತವಾಗಿದೆ, ಏಕೆಂದರೆ ನಾವು ಈಗಾಗಲೇ ಬಲಿಷ್ಠ ತಂಡವನ್ನ ಬಲಪಡಿಸುತ್ತಿದ್ದೇವೆ. ಆದರೆ, ಯಾರಾದರೂ ಫಾರ್ಮ್ ಕಳೆದುಕೊಂಡರೆ ಅಥವಾ ಯಾರಾದರೂ ಗಾಯಗೊಂಡರೆ, ಕಷ್ಟ " ಎಂದು ರಾಥೋರ್ ಹೇಳಿದ್ದಾರೆ.

Last Updated : Mar 10, 2021, 3:03 PM IST

ABOUT THE AUTHOR

...view details