ಆಕ್ಲೆಂಡ್ :ಮುಂಬರುವ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳು ಭಾರತದ ವಿರುದ್ಧ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅಭ್ಯಾಸ ಎಂದು ನಾವು ಪರಿಗಣಿಸುವುದಿಲ್ಲ ಎಂದು ನ್ಯೂಜಿಲ್ಯಾಂಡ್ ತಂಡದ ವೇಗದ ಬೌಲರ್ ನೈಲ್ ವ್ಯಾಗ್ನರ್ ತಿಳಿಸಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡ ಜೂನ್ 2ರಿಂದ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿ ಆಡುವುದಕ್ಕೆ ಈಗಾಗಲೇ ಕೆಲವು ಕಿವೀಸ್ ಆಟಗಾರರ ಇಂಗ್ಲೆಂಡ್ ತಲುಪಿದ್ದು, ಸೌತಾಂಪ್ಟನ್ನಲ್ಲಿ 2 ವಾರಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದೆ. ಸೋಮವಾರ ರಾಸ್ ಟೇಲರ್, ವ್ಯಾಗ್ನರ್, ಬಿಜೆ ವ್ಯಾಟ್ಲಿಂಗ್ ಹಾಗೂ ಟಿಮ್ ಸೌಥಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದೆ.
ಈ ಸರಣಿ ಕುರಿತು ಮಾತನಾಡಿದ ವ್ಯಾಗ್ನರ್, ನಾವು ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳನ್ನು ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಕೇವಲ ಅಭ್ಯಾಸ ಎಂದು ಭಾವಿಸುವುದಕ್ಕೆ ಹೋಗುವುದಿಲ್ಲ.