ಲಾರ್ಡ್ಸ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ನ ಕೊನೆಯ ದಿನ ಚೇಸ್ ಮಾಡಬಹುದಾದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಗೆಲ್ಲುವ ಮನಸ್ಸಿನಿಂದ ಆಡದಿದ್ದಕ್ಕೆ ಆಸ್ಟ್ರೇಲಿಯಾದ ದಂತಕತೆ ಶೇನ್ ವಾರ್ನರ್ ಕಿಡಿಕಾರಿದ್ದಾರೆ.
ಲಾರ್ಡ್ಸ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 5ನೇ ದಿನ 169ಕ್ಕೆ ಡಿಕ್ಲೇರ್ ಘೋಷಿಸಿ ಇನ್ನು 75 ಓವರ್ಗಳು ಉಳಿದಿರುವಂತೆ 273 ರನ್ಗಳ ಗುರಿ ನೀಡಿತ್ತು. ಆದರೆ, ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು 70 ಓವರ್ಗಳಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿ 3 ವಿಕೆಟ್ ಕಳೆದುಕೊಂಡು 170 ರನ್ಗಳಿಸಿ ಡ್ರಾ ಸಾಧಿಸಿದರು.
ಆರಂಭಿಕರಾಗಿ ಕಣಕ್ಕಿಳಿದಿದ್ದ ರೋರಿ ಬರ್ನ್ಸ್ ಮತ್ತು ಡಾಮ್ ಸಿಬ್ಲೆ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ ಗೆಲ್ಲದಿರಲು, ಸೋಲದಿದ್ದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಿದರು. 5 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿದ ಸಿಬ್ಲೆ 207 ಎಸೆತಗಳಲ್ಲಿ ಅಜೇಯ 60 ರನ್ಗಳಿಸಿದರೆ, ಪೋಪ್ 20 ರನ್ಗಳಿಸಿದರು. ಬರ್ನ್ಸ್ 81 ಎಸೆತಗಳಲ್ಲಿ 25, ಕ್ರಾಲೆ 25 ಎಸೆತಗಳಲ್ಲಿ 2, ರೂಟ್ 71 ಎಸೆತಗಳಲ್ಲಿ 40 ರನ್ಗಳಿಸಿ ಔಟಾದರು.