ಕರ್ನಾಟಕ

karnataka

ETV Bharat / sports

1768 ರನ್​ ದಾಖಲಾದ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ 74 ರನ್ ಗೆಲುವು.. ಪಾಕಿಸ್ತಾನಕ್ಕೆ ಕೈಕೊಟ್ಟ ಅದೃಷ್ಟ - England Pakistan Test series

ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ 74 ರನ್​ಗಳ ಜಯ ದಾಖಲಿಸಿತು. 17 ವರ್ಷಗಳ ಬಳಿಕ ಬ್ರಿಟಿಷರು ಪಾಕ್​ ನೆಲದಲ್ಲಿ ಗೆಲುವು ಪಡೆದರು.

england-beat-valiant-pakistan
ಪಾಕಿಸ್ತಾನಕ್ಕೆ ಕೈಕೊಟ್ಟ ಅದೃಷ್ಟ

By

Published : Dec 6, 2022, 7:48 AM IST

ರಾವಲ್ಪಿಂಡಿ(ಪಾಕಿಸ್ತಾನ):ಇಲ್ಲಿನ ಸಮತಟ್ಟಾದ ಮೈದಾನದಲ್ಲಿ ರನ್​ ಮಳೆಯೇ ಸುರಿದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ 74 ರನ್​ಗಳ ಜಯ ದಾಖಲಿಸಿದೆ. ಕೊನೆಯ ದಿನದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ ಆಲಿ ರಾಬಿನ್ಸನ್ ಮತ್ತು ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್​ಗೆ ಗೆಲುವು ತಂದುಕೊಟ್ಟರು. ಈ ಮೂಲಕ 17 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್​ ಜಯ ದಾಖಲಿಸಿದರು.

ಮೊದಲ ಇನಿಂಗ್ಸ್​ ಮುಗಿಯಲು 4 ದಿನ ತೆಗೆದುಕೊಂಡ ಪಂದ್ಯ ಡ್ರಾ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಗೆಲ್ಲುವ ಇರಾದೆ ಹೊಂದಿದ್ದ ಇಂಗ್ಲೆಂಡ್​ ಆಟಗಾರರು 2ನೇ ಇನಿಂಗ್ಸ್​ನಲ್ಲಿ ಕೇವಲ 36 ಓವರ್​ಗಳಲ್ಲಿ ಬಿರುಸಿನ ಬ್ಯಾಟ್​ ಮಾಡಿ 264 ರನ್​ಗಳಿಗೆ ಅಚ್ಚರಿಯ ಡಿಕ್ಲೇರ್​ ಮಾಡಿಕೊಂಡರು. ಕೊನೆಯ ದಿನದಾಟದ ನಾಲ್ಕು ಅವಧಿಯಲ್ಲಿ ಪಾಕಿಸ್ತಾನದ ಎಲ್ಲ ವಿಕೆಟ್​ ಉರುಳಿಸಿದ ಇಂಗ್ಲೆಂಡ್​ ಅಧಿಕಾರಯುತ ಜಯ ದಾಖಲಿಸಿತು.

ಕೊನೆಯಲ್ಲಿ ಹೈಡ್ರಾಮಾ:5 ನೇ ದಿನದಾಟ ಮುಕ್ತಾಯವಾಗಲು 30 ನಿಮಿಷ ಇದ್ದಾಗ ಬ್ಯಾಟ್​ ಮಾಡುತ್ತಿದ್ದ ಪಾಕಿಸ್ತಾನದ ಮೊಹಮದ್​ ಅಲಿ ಮೈದಾನ ತೊರೆದು ಶೌಚಾಲಯಕ್ಕೆ ಹೋದರು. 4 ನಿಮಿಷ ಆಟ ನಿಂತ ಬಳಿಕ ಮಂದ ಬೆಳಕಿನ ಕಾರಣ ನೀಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪಾಕಿಸ್ತಾನ ಯತ್ನಿಸಿತು. ಆದರೆ, ಇದಕ್ಕೊಪ್ಪದ ಇಂಗ್ಲೆಂಡ್​ ಆಟ ಮುಂದುವರಿಸಿತು. 46 ಎಸೆತಗಳನ್ನು ಎದುರಿಸಿ ಆಡುತ್ತಿದ್ದ ನಸೀಮ್​ ಶಾರನ್ನು ಜಾಕ್​ ಲೀಚ್​ ಎಲ್​ಬಿ ಬಲೆಗೆ ಬೀಳಿಸುವ ಮೂಲಕ ಇಂಗ್ಲೆಂಡ್​ ಗೆಲುವು ಸಾಧಿಸಿತು.

ದಾಖಲೆಯ ಗೆಲುವು:ಪಂದ್ಯದಲ್ಲಿ ಒಟ್ಟಾರೆ 1768 ರನ್​ಗಳು ದಾಖಲಾದವು. ಇದು ಅತಿ ಹೆಚ್ಚು ರನ್​ ಬಂದು ಫಲಿತಾಂಶ ನೀಡಿದ ಪಂದ್ಯ ಎಂಬ ದಾಖಲೆ ಬರೆಯಿತು. 1921 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಧ್ಯೆ ನಡೆದ ಪಂದ್ಯದಲ್ಲಿ 1753 ರನ್​ ದಾಖಲಾಗಿತ್ತು. ಆ ಪಂದ್ಯವನ್ನು ಆಸೀಸ್​ 119 ರನ್​ಗಳಿಂದ ವಶಪಡಿಸಿಕೊಂಡಿತ್ತು. ಇದು ಈವರೆಗಿನ ದಾಖಲೆಯಾಗಿತ್ತು.

ಇನಿಂಗ್ಸ್ ಲೆಕ್ಕಾಚಾರ:ಇಂಗ್ಲೆಂಡ್ ಮೊದಲ ಇನಿಂಗ್ಸ್​ 657, ಎರಡನೇ ಇನಿಂಗ್ಸ್​ 7 ವಿಕೆಟ್​ಗೆ 264 ಡಿಕ್ಲೇರ್​. ಪಾಕಿಸ್ತಾನ ಮೊದಲ ಇನಿಂಗ್ಸ್​ 579, ಎರಡನೇ ಇನಿಂಗ್ಸ್​ 268.

ಓದಿ:ನಿಧಾನಗತಿಯ ಓವರ್ ಮಾಡಿದ್ದಕ್ಕೆ ಟೀಂ ಇಂಡಿಯಾಗೆ ಭಾರಿ ದಂಡ ವಿಧಿಸಿದ ಐಸಿಸಿ

ABOUT THE AUTHOR

...view details