ಲಂಡನ್: ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 2ನೇ ಪಂದ್ಯದಲ್ಲಿ ಆಲ್ರೌಂಡರ್ ಸ್ಯಾಮ್ ಕರ್ರನ್ ಕಿಂಗ್ ಪೇರ್ ಅಥವಾ ಎರಡೂ ಇನ್ನಿಂಗ್ಸ್ನಲ್ಲಿ ಗೋಲ್ಡನ್ ಡಕ್ ಆದ ಅಪಕೀರ್ತಿಗೆ ಪಾತ್ರರಾಗಿದ್ದಾರೆ.
272 ರನ್ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್ 90 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿ ಸ್ಯಾಮ್ ಕರ್ರನ್, ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಕೀಪರ್ ಪಂತ್ಗೆ ಕ್ಯಾಚ್ ನೀಡಿ ಔಟಾದರು. ಮೊದಲ ಇನ್ನಿಂಗ್ಸ್ನಲ್ಲಿ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಗೋಲ್ಡನ್ ಡಕ್ ಆಗಿದ್ದರು.
ಈ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 364 ರನ್ಗಳಿಸಿತ್ತು, ಇದಕ್ಕುತ್ತರವಾಗಿ ಇಂಗ್ಲೆಂಡ್ 391 ರನ್ಗಳಿಸಿತ್ತು. 27 ರನ್ಗಳ ಹಿನ್ನಡೆಯಿಂದ 2ನೇ ಇನ್ನಿಂಗ್ಸ್ನಲ್ಲಿ ಭಾರತ 298ರನ್ಗಳಿಗೆ ಡಿಕ್ಲೇರ್ ಘೋಷಿಸಿ ಇಂಗ್ಲೆಂಡ್ಗೆ 272 ರನ್ಗಳ ಟಾರ್ಗೆಟ್ ನೀಡಿದೆ.
ಕಿಂಗ್ ಪೇರ್ಸ್ ಸಂಪಾದಿಸಿದ ಇಂಗ್ಲೆಂಡ್ನ 4ನೇ ಬ್ಯಾಟ್ಸ್ಮನ್:
- ವಿಲಿಯಂ ಅಟ್ಟೆವೆಲ್ vs ಆಸ್ಟ್ರೇಲಿಯಾ, ಸಿಡ್ನಿ -1891/92
- ಎರ್ನಿ ಹೇನ್ಸ್ vs ದಕ್ಷಿಣ ಆಫ್ರಿಕಾ, ಕೇಪ್ ಟೌನ್- 1905/06
- ಜೇಮ್ಸ್ ಆಂಡರ್ಸನ್ vs ಭಾರತ, ವೈಜಾಗ್- 2016/17
- ಸ್ಯಾಮ್ ಕರ್ರನ್ vs ಭಾರತ, ಲಾರ್ಡ್ಸ್- 2021
ಇದನ್ನು ಓದಿ: ಪದೇ ಪದೇ ಕೆಣಕಿದ ಆಂಗ್ಲರಿಗೆ ಬ್ಯಾಟ್ನಿಂದಲೇ ಉತ್ತರಿಸಿದ ಶಮಿ-ಬುಮ್ರಾ