ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 56 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿರುವ ಭಾರತ ಆಘಾತ ಅನುಭವಿಸಿದೆ.
ನಾಲ್ಕನೇ ದಿನ 27 ರನ್ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತೀಯ ತಂಡ 27 ರನ್ಗಳಿಸುವಷ್ಟರಲ್ಲಿ ಆರಂಭಿಕರಾದ ರೋಹಿತ್ ಶರ್ಮಾ (21) ಮತ್ತು ಕೆ.ಎಲ್ ರಾಹುಲ್ (5) ವಿಕೆಟ್ ಕಳೆದುಕೊಂಡಿತು. ಮಾರ್ಕ್ವುಡ್ ಇವರಿಬ್ಬರ ವಿಕೆಟ್ ಪಡೆದು ಇಂಗ್ಲೆಂಡ್ಗೆ ಮೇಲುಗೈ ತಂದುಕೊಟ್ಟರು.
ಇನ್ನು 3ನೇ ವಿಕೆಟ್ಗೆ ಒಂದಾದ ನಾಯಕ ಕೊಹ್ಲಿ ಮತ್ತು ಪೂಜಾರ 28 ರನ್ಗ ಸೇರಿಸಿ ಉತ್ತಮ ಜೊತೆಯಾಟ ಕಟ್ಟುತ್ತಿದ್ದರು. ಆದರೆ ಸ್ಯಾಮ್ ಕರನ್ ಓವರ್ನಲ್ಲಿ ಹೊರ ಹೋಗುತ್ತಿದ್ದ ಚೆಂಡನ್ನು ಕೆಣಕಿದ ಅವರು ಕೀಪರ್ ಜೋಸ್ ಬಟ್ಲರ್ಗೆ ಕ್ಯಾಚಿತ್ತರು.