ಲಂಡನ್ :ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿವೆ. ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲನೇ ಪಂದ್ಯ ಮಳೆಯ ಕಾರಣದಿಂದ ನೀರಸ ಡ್ರಾನಲ್ಲಿ ಅಂತ್ಯಗೊಂಡರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 151 ರನ್ಗಳ ರೋಚಕ ಜಯ ಸಾಧಿಸಿತ್ತು.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ಗೆ ಅವಕಾಶ ನೀಡಿರಲಿಲ್ಲ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ಗೆ ತಂಡದಲ್ಲಿ ಸ್ಥಾನ ನೀಡದೇ ಇರುವ ವಿಷಯ ತಿಳಿದ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ನಂತರ ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಸಹ ಅವಕಾಶ ನೀಡಲಿಲ್ಲ. ಎರಡೂ ಪಂದ್ಯಗಳಲ್ಲಿಯೂ ಅಶ್ವಿನ್ಗೆ ತಂಡದಲ್ಲಿ ಸ್ಥಾನ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆದಿದ್ದವು.
ಇನ್ನು, ಇದೀಗ ಅಶ್ವಿನ್ ಮೊದಲೆರಡು ಪಂದ್ಯಗಳಲ್ಲಿ ತಮಗೆ ಸ್ಥಾನ ದೊರಕದೇ ಇರುವುದಕ್ಕೆ ಅಸಲಿ ಕಾರಣವೇನೆಂಬುದನ್ನು ಬಿಚ್ಚಿಡುವುದರ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
'ಪಂದ್ಯ ಆರಂಭಕ್ಕೂ ಮುನ್ನವೇ ಯಾವುದೇ ಮಳೆಯ ಮುನ್ಸೂಚನೆ ಇರಲಿಲ್ಲ, ಸ್ಪಷ್ಟವಾದ ಆಕಾಶ ಮತ್ತು ಒಣ ಪಿಚ್ ಇದ್ದದ್ದು ನೋಡಿ ಲಾರ್ಡ್ಸ್ ಪಂದ್ಯದಲ್ಲಿ ನನ್ನನ್ನು ಕಣಕ್ಕಿಳಿಯಲು ಸಿದ್ಧನಾಗು ಎಂದು ತಂಡದ ಆಯ್ಕೆ ಸಮಿತಿ ತಿಳಿಸಿತ್ತು.
ಆದರೆ, ಪಂದ್ಯ ಆರಂಭಕ್ಕೆ ಇನ್ನೇನು ಕೆಲ ಕ್ಷಣಗಳಿರುವಾಗ ಮೋಡ ಆವರಿಸಿತ್ತು. ಹೀಗಾಗಿ, ಈ ಹಿಂದೆ ಇದ್ದ ತಂಡವನ್ನೇ 2ನೇ ಪಂದ್ಯದಲ್ಲಿಯೂ ಮುಂದುವರೆಸಿ, ನನ್ನನ್ನು ಅನಿವಾರ್ಯವಾಗಿ ತಂಡದಿಂದ ಕೈಬಿಡಲಾಯಿತು' ಎಂದು ಅಶ್ವಿನ್ ಹೇಳಿದ್ದಾರೆ.
ಇದನ್ನೂ ಓದಿ : ಆರ್ಸಿಬಿಗೆ ಶಾಕ್: ಮುಂದುವರಿದ ಭಾಗದ ಐಪಿಎಲ್ಗೆ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ ಅಲಭ್ಯ?
London: Seasoned off-spinner Ravichandran Ashwin has revealed he was in contention to play in the second Test between India and England at the Lord's Cricket Ground till a sudden spell of rain before the toss changed the team composition.