ಕರ್ನಾಟಕ

karnataka

ETV Bharat / sports

ಟಿ 20 ವಿಶ್ವಕಪ್​ಗೆ ಬುಮ್ರಾ ಬದಲಿಗೆ ಶಮಿ : ರಾಹುಲ್​ ದ್ರಾವಿಡ್​

ಬಿಸಿಸಿಐ ಇನ್ನೂ ಬುಮ್ರಾ ಬದಲಿ ಟಿ 20ವಿಶ್ವಕಪ್​ ಯಾರು ಆಡಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ದಕ್ಷಿಣ ಆಫ್ರಿಕಾ ಪಂದ್ಯದ ನಂತರ ಬ್ಲೂ ಬಾಯ್ಸ್​ ಕೋಚ್​ ಶಮಿಯ ಆಯ್ಕೆಯ ಆದ್ಯತೆ ಬಗ್ಗೆ ಹೇಳಿದ್ದಾರೆ.

dravid-hints-shami-as-bumrahs
ಟಿ 20ವಿಶ್ವಕಪ್​ಗೆ ಬುಮ್ರಾ ಬದಲಿಗೆ ಶಮಿ

By

Published : Oct 5, 2022, 4:20 PM IST

ಇಂದೋರ್:ಕೋವಿಡ್​ 19ಗೆ ಗುಣಮುಖರಾಗಿ ಫಿಟ್​ನೆಸ್​ ಸಾಬೀತಾದರೆ ಮೊಹಮ್ಮದ್ ಶಮಿ ಅವರನ್ನು ಬೆನ್ನು ನೋವಿನ ಕಾರಣ ಟಿ20ವಿಶ್ವಕಪ್​ನಿಂದ ಹೊರಗುಳಿದಿರುವ ಬುಮ್ರಾ ಜಾಗಕ್ಕೆ ಆಯ್ಕೆ ಮಾಡಲಾಗುವುದು ಎಂದು ಭಾರತದ ಕೋಚ್​ ರಾಹುಲ್​ ದ್ರಾವಿಡ್​ ಹೇಳಿದ್ದಾರೆ. ದೀಪಕ್​ ಚಹಾರ್​ ಜೊತೆಗೆ ಮೊಹಮ್ಮದ್ ಶಮಿ ವಿಶ್ವಕಪ್​ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಶಮಿ ಕೋವಿಡ್​ಗೆ ಒಳಗಾದ ಕಾರಣ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎದುರಿನ ಟಿ 20 ಸರಣಿಗಳಲ್ಲಿ ಅವರು ಭಾಗವಹಿಸಲಿಲ್ಲ. ಆಸ್ಟ್ರೇಲಿಯಾ ಎದುರಿನ ಪಂದ್ಯದ ನಂತರ ಬೆನ್ನು ನೋವಿಗೆ ತುತ್ತಾಗಿ ಬುಮ್ರಾ ಹೊರಗುದಿದ್ದಾರೆ. ನಂತರ ದಕ್ಷಿಣ ಆಫ್ರಿಕಾ ಎದರುನ ಪಂದ್ಯಕ್ಕೆ ಬುಮ್ರಾ ಜಾಗಕ್ಕೆ ಮೊಹಮ್ಮದ್ ಸಿರಾಜ್ ಆಯ್ಕೆ ಮಾಡಲಾಗಿತ್ತು.

'ಬುಮ್ರಾ ಬದಲಿ ಯಾರನ್ನು ಆಡಿಸಬೇಕು ಎಂಬುದಕ್ಕೆ ಅಕ್ಟೋಬರ್​ 15ರ ವರೆಗೂ ಅವಕಾಶ ಇದೆ. ಈಗಾಗಲೇ ಶಮಿ ಮೀಸಲು ಪಡೆಯಲ್ಲಿ ಇದ್ದಾರೆ. ಕೋವಿಡ್​ಗೆ ಬಂದ ಕಾರಣ ಭಾರತದಲ್ಲಿ ನಡೆದ ಎರಡು ಸರಣಿಗಳಿಂದ ಹೊರಗಿದ್ದರು ಎಂದು ರಾಹುಲ್​ ದ್ರಾವಿಡ್ ನಿನ್ನೆ ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಪಂದ್ಯದ ನಂತರ ಮಾತನಾಡುವಾಗ ಹೇಳಿದ್ದಾರೆ. ​

ಎನ್​ಸಿಎ ನೀಡುವ ವರದಿಯನ್ನು ಆಧರಿಸಿ ಶಮಿ ಆಯ್ಕೆ ಕಾಯ್ದಿರಿಸಲಾಗಿದೆ. ಕೋವಿಡ್​ಗೆ ಒಳಪಟ್ಟ 14 ರಿಂದ 15 ದಿನಗಳ ನಂತರ ಚೇತರಿಕೆಯ ವರದಿ ಬಂದರೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಉತ್ತಮ ವೇಗಿಯ ಅಗತ್ಯತೆ ಇದೆ. ಹೋಮ್​ ಸೀರೀಸ್​ನಲ್ಲಿ ಡೆತ್​ ಓವರ್​ಗಳಲ್ಲಿ ನಿಯಂತ್ರಣ ಸಾಧಿಸುವಲ್ಲಿ ಭಾರತೀಯ ಬೌಲರ್​ಗಳು ವಿಫಲರಾಗಿದ್ದಾರೆ. ಹೀಗಾಗಿ ಅನುಭವಿ ಮತ್ತು ಡೆತ್​ ಓವರ್​ಗಳಲ್ಲಿ ನಿಯಂತ್ರಣ ಸಾಧಿಸುವ ಬೌಲರ್​ಗಳ ಅವಶ್ಯಕತೆ ಇದೆ.

ಭಾರತ ತಂಡ ನಾಳೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಪರ್ತನಲ್ಲಿ ಭಾರತ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್​ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಆಡಲಿದೆ.

ಇದನ್ನೂ ಓದಿ :ಕ್ಲೀನ್​ ಸ್ಪೀಪ್​ ಕನಸು ಭಗ್ನ: ದಕ್ಷಿಣ ಆಫ್ರಿಕಾಗೆ 49 ರನ್​ಗಳ ಗೆಲುವು


ABOUT THE AUTHOR

...view details