ಪಾಟ್ನಾ(ಬಿಹಾರ):ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದ ದೂರವಿದ್ದರೂ, ಅವರ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಕಮ್ಮಿಯಾಗಿಲ್ಲ. ಇದನ್ನೇ ಬಳಸಿಕೊಂಡ ದುಷ್ಕರ್ಮಿಗಳು ಅವರ ಹೆಸರಿನಲ್ಲಿ ಸೈಬರ್ ಕ್ರೈಂ ಎಸಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ಫೈನಾನ್ಸ್ ಕಂಪನಿಯೊಂದಕ್ಕೆ ಎಂಎಸ್ ಧೋನಿ ರಾಯಭಾರಿ ಎಂದು ನಂಬಿಸಿ ಹಣ ಹೂಡಿಕೆ ಮಾಡಿಸುಕೊಂಡು ವಂಚಿಸಿದ್ದು, ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವೇನು?:ಪಾಟ್ನಾದಲ್ಲಿ ಕೆಲ ದುಷ್ಕರ್ಮಿಗಳು ಆನ್‌ಲೈನ್‌ನಲ್ಲಿ ನಕಲಿ ಫೈನಾನ್ಸ್ ಕಂಪನಿಯನ್ನು ಆರಂಭಿಸಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಕಂಪನಿಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ರಾಯಭಾರಿ ಎಂದು ಜನರನ್ನು ನಂಬಿಸಿದ್ದಾರೆ.