ದುಬೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದ ಬಳಿಕ ಅಪರೂಪದ ಘಟನೆ ನಡೆದಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ರಾಹುಲ್ ಚಹರ್, ಪಂದ್ಯ ಮುಗಿಯುತ್ತಿದ್ದಂತೆ ತನ್ನ ಗರ್ಲ್ಫ್ರೆಂಡ್ಗೆ ಪ್ರಪೋಸ್ ಮಾಡಿದ್ದು, ಉಂಗುರ ತೊಡಿಸಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ನೇರವಾಗಿ ಗರ್ಲ್ಫ್ರೆಂಡ್ ಕುಳಿತುಕೊಂಡಿದ್ದ ಸ್ಥಳಕ್ಕೆ ತೆರಳಿರುವ ಚಹರ್, ಕೈಬೆರಳಿಗೆ ಉಂಗುರ ತೊಡಿಸಿ ಲವ್ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಜಯ ಭಾರದ್ವಾಜ್ ಯೆಸ್ ಎಂಬ ಉತ್ತರ ನೀಡಿದ್ದಾರೆ.
ಇಂದಿನ ಪಂದ್ಯದಲ್ಲಿ 4 ಓವರ್ ಮಾಡಿರುವ ಚಹರ್ 48 ರನ್ ನೀಡುವ ಮೂಲಕ 1 ವಿಕೆಟ್ ಪಡೆದುಕೊಂಡಿದ್ದಾರೆ. ಇಂದಿನ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಸೋಲು ಕಂಡಿದ್ದು, ಇದರ ಹೊರತಾಗಿ ಕೂಡ ಈಗಾಗಲೇ 14ನೇ ಆವೃತ್ತಿ ಐಪಿಎಲ್ನಲ್ಲಿ ಪ್ಲೇ-ಆಫ್ಗೆ ಲಗ್ಗೆ ಹಾಕಿದೆ.