ನವದೆಹಲಿ:2023ರ ಐಪಿಎಲ್‌ನ ಮಿನಿ ಹರಾಹಜಿಗೆ ವೇದಿಕೆ ಸಜ್ಜಾಗಿದ್ದು, 991 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 714 ಭಾರತೀಯರು ಮತ್ತು 277 ವಿದೇಶಿ ಆಟಗಾರರಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಆದರೆ, 991ರಲ್ಲಿ 87 ಆಟಗಾರರು ಮಾತ್ರ ಹರಾಜಾಗಲಿದ್ದಾರೆ. ಡಿಸೆಂಬರ್ 23ಕ್ಕೆ ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ.
ಪಟ್ಟಿಯಲ್ಲಿ ಆಸ್ಟ್ರೇಲಿಯಾದ (57) ಅತೀ ಹೆಚ್ಚು ಆಟಗಾರರು ಮತ್ತು ವೆಸ್ಟ್ ಇಂಡೀಸ್ (33), ಇಂಗ್ಲೆಂಡ್ (31), ನ್ಯೂಜಿಲ್ಯಾಂಡ್ (27), ಶ್ರೀಲಂಕಾ (23), ಅಫ್ಘಾನಿಸ್ತಾನ (14), ಐರ್ಲೆಂಡ್ (8), ನೆದರ್ಲ್ಯಾಂಡ್ಸ್ (7), ಬಾಂಗ್ಲಾದೇಶ (6), ಯುಎಇ (6) , ಜಿಂಬಾಬ್ವೆ (6) ನಮೀಬಿಯಾ (6) ಮತ್ತು ಸ್ಕಾಟ್ಲೆಂಡ್ (2) ಆಟಗಾರರರು ಹರಾಜಿನಲ್ಲಿದ್ದಾರೆ.
ವಿದೇಶಿ ಟಾಪ್ ಆಟಗಾರರಾದ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್, ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ವೆಸ್ಟ್ ಇಂಡೀಸ್ ವೈಟ್-ಬಾಲ್ನ ಮಾಜಿ ನಾಯಕ ನಿಕೋಲಸ್ ಪೂರನ್ ಮತ್ತು ಇಂಗ್ಲೆಂಡ್‌ನ ಟಿ -20 ವಿಶ್ವಕಪ್ ವಿಜೇತ ತಂಡದ ಸ್ಯಾಮ್ ಕುರ್ರಾನ್ 2 ಕೋಟಿ ಶ್ರೇಣಿಯಲ್ಲಿ ಹರಾಜಿನಲ್ಲಿದ್ದಾರೆ. ಆದರೆ, ಭಾರತದ ಯಾವ ಆಟಗಾರನೂ 2 ಕೋಟಿ ಪಟ್ಟಿಯಲ್ಲಿ ಇಲ್ಲ.
786 ಅನ್‌ಕ್ಯಾಪ್ಡ್ ಆಟಗಾರ ನೋಂದಣಿ:786 ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿಲ್ಲ. ಇದರಲ್ಲಿ 20 ಅಸೋಸಿಯೇಟ್ ದೇಶಗಳ ಆಟಗಾರರು ಸೇರಿದ್ದಾರೆ. 604 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರಿದ್ದು, ಅವರಲ್ಲಿ 91 ಮಂದಿ ಮೊದಲ ಬಾರಿಗೆ ಐಪಿಎಲ್‌ನ ಭಾಗವಾಗಲಿದ್ದಾರೆ.
ಭಾರತದ ರಾಷ್ಟ್ರೀಯ ತಂಡದ ಸ್ಟಾರ್ ಪ್ಲೇಯರ್ಗಳಾಗಿದ್ದ ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಎರಡು ಕೋಟಿಗಿಂತ ಕಡಿಮೆ ಮೂಲ ಬೆಲೆ ಹೊಂದಿದ್ದಾರೆ. ಕಳೆದ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಒಂದು ಕೋಟಿಗೆ ರಹಾನೆ ಅವರನ್ನು ಖರೀದಿಸಿತ್ತು. ಈ ಬಾರಿ ರೈಡರ್ಸ್ ಕೈಬಿಟ್ಟಿದ್ದು ರಹಾನೆಗೆ 50 ಲಕ್ಷ ಮೂಲ ಬೆಲೆಯಾಗಿದೆ. ವೇಗಿ ಇಶಾಂತ್ ಶರ್ಮಾ ಕೂಡ ತಂಡದಿಂದ ಹೊರ ಉಳಿದಿದ್ದು 75 ಲಕ್ಷ ಬೆಲೆ ನಿಗದಿಯಾಗಿದೆ.
ನಾಯಕನ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ 14 ಕೋಟಿ ಕೊಟ್ಟು ಕೊಂಡಿತ್ತಾದರೂ ಈ ಬಾರಿ ತಂಡದಿಂದ ಹೊರಗಿಟ್ಟಿದೆ. ವಿಜಯ ಹಜಾರೆಯಲ್ಲಿ ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನದ್ಕತ್ ಅವರನ್ನು ಮುಂಬೈ ಕೈಬಿಟ್ಟಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಜಯದೇವ್ ಉನದ್ಕತ್ ಉತ್ತಮ ಬೌಲಿಂಗ್ ಪ್ರರ್ಶನ ಮಾಡುತ್ತಿದ್ದಾರೆ.
ಸ್ಯಾಮ್ ಕುರ್ರಾನ್ ಮತ್ತು ಬೆನ್ ಸ್ಟೋಕ್ಸ್ ಹೋದ ಬಾರಿ ಐಪಿಎಲ್ನಲ್ಲಿ ಗಾಯದ ಸಮಸ್ಯೆಯಿಂದ ಅರ್ಧದಲ್ಲೇ ಹೊರಹೋಗಿದ್ದರು. ಡ್ವೇನ್ ಬ್ರಾವೋ ಐಪಿಎಲ್‌ಗೆ ವಿದಾಯ ಸಾಧ್ಯತೆ ಇದೆ. ಸೂಪರ್ ಕಿಂಗ್ಸ್ ಬ್ರಾವೋ ಅವರನ್ನು ಈ ಕಾರಣದಿಂದಲೇ ಪಟ್ಟಿಯಿಂದ ಬಿಟ್ಟಿದೆ ಎನ್ನಲಾಗಿದೆ. ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನೆ ಮತ್ತು ಪ್ಯಾಟ್ ಕಮಿನ್ಸ್ ಆ್ಯಶಸ್ ಸರಣಿ ಹಿನ್ನೆಲೆ ಐಪಿಎಲ್ನಿಂದ ಹೊರಗುಳಿದಿದ್ದಾರೆ.
2ಕೋಟಿ ಮೂಲ ಬೆಲೆಯ ಆಟಗಾರರು: ನಾಥನ್ ಕೌಲ್ಟರ್-ನೈಲ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಟಾಮ್ ಬ್ಯಾಂಟನ್, ಸ್ಯಾಮ್ ಕರ್ರಾನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಜೇಮೀ ಓವರ್‌ಟನ್, ಕ್ರೇಗ್ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಕೇನ್ ವಿಲಿಯಮ್ಸನ್, ರಿಲೀ ರೊಸೊವ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಂಜೆಲೊ ಮ್ಯಾಥ್ಯೂಸ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್
1.5 ಕೋಟಿ ಮೂಲ ಬೆಲೆಯ ಆಟಗಾರರು: ಸೀನ್ ಅಬಾಟ್, ರಿಲೆ ಮೆರೆಡಿತ್, ಝೈ ರಿಚರ್ಡ್ಸನ್, ಆಡಮ್ ಝಂಪಾ, ಶಾಕಿಬ್ ಅಲ್ ಹಸನ್, ಹ್ಯಾರಿ ಬ್ರೂಕ್, ವಿಲ್ ಜ್ಯಾಕ್ಸ್, ಡೇವಿಡ್ ಮಲಾನ್, ಜೇಸನ್ ರಾಯ್, ಶೆರ್ಫೇನ್ ರುದರ್ಫೋರ್ಡ್
1 ಕೋಟಿ ಮೂಲ ಬೆಲೆಯ ಆಟಗಾರರು: ಮಯಾಂಕ್ ಅಗರ್ವಾಲ್, ಕೇದಾರ್ ಜಾಧವ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್, ಮೊಯಿಸೆಸ್ ಹೆನ್ರಿಕ್ಸ್, ಆಂಡ್ರ್ಯೂ ಟೈ, ಜೋ ರೂಟ್, ಲ್ಯೂಕ್ ವುಡ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೇಮಿಸನ್, ಟಾಮ್ ಹೆನ್ರೀಸನ್, ಮ್ಯಾಟ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿಕ್ ಕ್ಲಾಸೆನ್, ತಬ್ರಿಜ್ ಶಮ್ಸಿ, ಕುಶಾಲ್ ಪೆರೆರಾ, ರೋಸ್ಟನ್ ಚಸೇ, ರಖ್ಮ್ ಕೊರ್ನ್‌ಬಲ್ಲಲ್, ಶಾಯ್ ಹೋಪ್, ಅಕಾಲ್ ಹೊಸೈನ್, ಡೇವಿಡ್ ಬಿಎಸ್.
ಇದನ್ನೂ ಓದಿ:'ಚಿನ್ನದ ಹುಡುಗ' ನೀರಜ್ ಚೋಪ್ರಾಗೆ ವಿಶೇಷ ಜೆರ್ಸಿ ಜೊತೆ ಒಂದು ಕೋಟಿ ರೂ. ನೀಡಿದ CSK