ಕರ್ನಾಟಕ

karnataka

ETV Bharat / sports

ನ್ಯೂಜಿಲೆಂಡ್ ವಿರುದ್ಧ ಹಾರ್ದಿಕ್​ ಅಲಭ್ಯ: ರೇಸ್‌ನಲ್ಲಿ ಶಮಿ, ಸೂರ್ಯ, ಕಿಶನ್​; ಯಾರಿಗೆ ಸಿಗಲಿದೆ ಅವಕಾಶ? - ETV Bharath Kannada news

ಧರ್ಮಶಾಲಾ ಮೈದಾನದಲ್ಲಿ ನ್ಯೂಜಿಲೆಂಡ್​ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್​ ಪಾಂಡ್ಯ ಅಲಭ್ಯರಾಗಿದ್ದು, ಅವರ ಬದಲಿಗೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಪ್ರಶ್ನೆ.

Cricket World Cup 2023
Cricket World Cup 2023

By ETV Bharat Karnataka Team

Published : Oct 20, 2023, 4:43 PM IST

ಪುಣೆ/ಧರ್ಮಶಾಲಾ: ಪುಣೆಯಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಉಪ ನಾಯಕ ಹಾರ್ದಿಕ್​ ಪಾಂಡ್ಯ ಬೌಲಿಂಗ್​ ವೇಳೆ ಕ್ಷೇತ್ರ ರಕ್ಷಣೆಗೆ ಮುಂದಾದಾಗ ಎಡ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದರು. ನಂತರ ಆ ಪಂದ್ಯದಿಂದ ಹೊರಗುಳಿದರು. ಬಿಸಿಸಿಐ ಮೂಲಗಳ ಪ್ರಕಾರ, ಹಾರ್ದಿಕ್​ ಪಾಂಡ್ಯ ನ್ಯೂಜಿಲೆಂಡ್​ ವಿರುದ್ಧ ಆಡುತ್ತಿಲ್ಲ.

ಹೀಗಾಗಿ ಹಾರ್ದಿಕ್​ ಅವರ 6ನೇ ಸ್ಥಾನ ಖಾಲಿ ಆಗುತ್ತಿದೆ. ಭಾರತಕ್ಕೆ ಒಬ್ಬ ಆಲ್​ರೌಂಡ್​ ಕೊರತೆ ಎದುರಾಗಿದೆ. ಸೂರ್ಯ ಕುಮಾರ್​ ಯಾದವ್​ ಮತ್ತು ಇಶಾನ್​ ಕಿಶನ್​ ತಂಡದ ಮುಂದಿರುವ ಬ್ಯಾಟಿಂಗ್​ ಆಯ್ಕೆ. ಬೌಲಿಂಗ್​ನಲ್ಲಿ ಮೊಹಮ್ಮದ್​ ಶಮಿ ಇದ್ದಾರೆ. ಆದರೆ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹಾರ್ದಿಕ್ ಪಾಂಡ್ಯ ತಂಡಕ್ಕೆ ಬ್ಯಾಟಿಂಗ್​ ಹಾಗೂ ಬೌಲಿಂಗ್​ನ ಬಲ ನೀಡುತ್ತಾ ಬಂದಿದ್ದಾರೆ. ಮೂರು ಪಂದ್ಯಗಳಲ್ಲಿ 16 ಓವರ್​​ ಮಾಡಿದ್ದು 7 ವಿಕೆಟ್​ ಪಡೆದಿದ್ದಾರೆ. ನಾಲ್ಕರಲ್ಲಿ 1 ಪಂದ್ಯದಲ್ಲಿ ಮಾತ್ರ ಬ್ಯಾಟಿಂಗ್​ ಅವಕಾಶ ಸಿಕ್ಕಿದ್ದು, 8 ಎಸೆತಗಳಲ್ಲಿ 1 ಸಿಕ್ಸರ್​ ಸಹಾಯದಿಂದ 11 ರನ್​ ಗಳಿಸಿದ್ದಾರೆ. 5ಕ್ಕೂ ಹೆಚ್ಚು ಓವರ್​ ಮಾಡುವ ಸಾಮರ್ಥ್ಯ ಹೊಂದಿರುವ ಹಾರ್ದಿಕ್,​ ಮೊದಲ ಪವರ್​ ಪ್ಲೇ ನಂತರ ತಂಡಕ್ಕೆ ವಿಕೆಟ್​ ತಂದುಕೊಟ್ಟಿದ್ದಾರೆ.

ಶಾರ್ದೂಲ್​ಗೆ ಕೊಕ್​?: ಕಳೆದ ಮೂರು ಪಂದ್ಯದಲ್ಲಿ ಶಾರ್ದೂಲ್​ ಠಾಕೂರ್​ ಅತ್ಯುತ್ತಮ​ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. 17 ಓವರ್‌ಗಳನ್ನು ಮಾಡಿ 3 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಎಕಾನಮಿ ಉತ್ತಮವಾಗಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ಕೊಕ್​ ಕೊಡುವ ಸಾಧ್ಯತೆ ಇದೆ. ಹೀಗಾಗಿ ಮೂವರು ಪ್ರಮುಖ ವೇಗಿಗಳ ಜತೆ ಮುಂದಿನ ಪಂದ್ಯಕ್ಕೆ ಬ್ಲೂಬಾಯ್ಸ್​ ತಯಾರಿ ನಡೆಸುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ಮಧ್ಯಮ ಕ್ರಮಾಂಕದಲ್ಲಿ ಇಶಾನ್​ ಕಿಶನ್​ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೂರ್ಯ ಕುಮಾರ್​ ಯಾದವ್ ಅರ್ಧಶತಕಗಳ ಮೂಲಕ ಏಕದಿನದಲ್ಲಿ ಲಯಕ್ಕೆ ಮರಳಿದ್ದಾರೆ. ಹಾರ್ದಿಕ್​ ಬದಲು ಈ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ.

ಬ್ಯಾಟಿಂಗ್​ ಸ್ನೇಹಿ ಧರ್ಮಶಾಲಾ: ಧರ್ಮಶಾಲಾ ಪಿಚ್​ ಬ್ಯಾಟಿಂಗ್​ ಸ್ನೇಹಿ ಆಗಿದೆ. ಇಂಗ್ಲೆಂಡ್​ ಈ ಪಿಚ್‌ನಲ್ಲಿ 364 ರನ್‌ಗಳ ಬೃಹತ್​ ಇನ್ನಿಂಗ್ಸ್​ ಕಟ್ಟಿದ್ದಲ್ಲದೇ, ನೆದರ್ಲೆಂಡ್​ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ​ 245 ರನ್​ ಗಳಿಸಿತ್ತು. ಸ್ಪಿನ್‌ಸ್ನೇಹಿಯಾಗಿಯೂ ವರ್ತಿಸಿದೆ. ಅಫ್ಘಾನ್​-ಬಾಂಗ್ಲಾ, ಇಂಗ್ಲೆಂಡ್​ - ಬಾಂಗ್ಲಾ ಪಂದ್ಯದಲ್ಲಿ ಸ್ಪಿನ್ನರ್​ಗಳು ಕಮಾಲ್​ ಮಾಡಿದ್ದಾರೆ. ಕಿವೀಸ್​ ವಿರುದ್ಧ ಅಶ್ವಿನ್​ಗೆ ಅವಕಾಶ ಸಿಗುತ್ತಾ? ಕಾದುನೋಡಬೇಕಿದೆ.

ಇದನ್ನು ಓದಿ:ಹಾರ್ದಿಕ್​ ಹಿಮ್ಮಡಿಗೆ ಗಾಯ, ನ್ಯೂಜಿಲೆಂಡ್​ ಪಂದ್ಯಕ್ಕೆ ಅಲಭ್ಯ.. ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲಿರುವ ಸ್ಟಾರ್​ ಆಲ್​ರೌಂಡರ್​

ABOUT THE AUTHOR

...view details