ಕರ್ನಾಟಕ

karnataka

ETV Bharat / sports

ಹಕ್ಕಿ ಹಾರೋದು ರೆಕ್ಕೆಯಿಂದಲ್ಲ ಆತ್ಮವಿಶ್ವಾಸದಿಂದ.. ವಿಶ್ವಕಪ್​ನಿಂದ ಹೊರಬಿದ್ದ ಶಿಖರ್​ ಟ್ವೀಟ್​..

ಮೂರು ವಾರಗಳ ಕಾಲ ವಿಶ್ವಕಪ್​ ಟೂರ್ನಿಯಿಂದ ಹೊರಗುಳಿದಿರುವ ಶಿಖರ್​ ಧವನ್ ಆತ್ಮ ವಿಶ್ವಾಸದ ಬಲದಿಂದ ಗೆದ್ದು ಬರೋದಾಗಿ ಟ್ವಿಟ್ಟರ್​ನಲ್ಲಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ವಿಶ್ವಕಪ್​ನಿಂದ ಹೊರಬಿದ್ದ ಶಿಖರ್​ ಟ್ವೀಟ್

By

Published : Jun 12, 2019, 2:33 PM IST

ಇಂಗ್ಲೆಂಡ್​: ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಮೂರು ವಾರಗಳ ಕಾಲ ವಿಶ್ವಕಪ್​ ಟೂರ್ನಿಯಿಂದ ಹೊರಗುಳಿದಿರುವ ಶಿಖರ್​ ಧವನ್ ಟ್ವೀಟ್​ ಮಾಡುವ ಮೂಲಕ ತಾವು ಕಮ್​​ ಬ್ಯಾಕ್​ ಮಾಡೋದಾಗಿ ಹೇಳಿದ್ದಾರೆ.

ಆಕಾಶದಲ್ಲಿ ಹಕ್ಕಿ ಹಾರುವ ಪಕ್ಷಿ ರೆಕ್ಕೆಯನ್ನ ಕೆಲವೊಮ್ಮೆ ಕತ್ತರಿಸಲಾಗುತ್ತದೆ. ಆದರೆ, ಆ ಹಕ್ಕಿ ಹಾರೋದು ರೆಕ್ಕೆಯ ಬಲದಿಂದಲ್ಲ. ಬದಲಾಗಿ ಆತ್ಮ ವಿಶ್ವಾಸದ ಶಕ್ತಿಯಿಂದ ಎಂಬ ಹಿಂದಿ ಪದ್ಯದ ಸಾಲುಗಳನ್ನ ಧವನ್​ ಟ್ವೀಟ್​ ಮಾಡಿದ್ದಾರೆ. ಈ ಮೂಲಕ ಗಾಯದ ಸಮಸ್ಯೆಯನ್ನ ಆತ್ಮ ವಿಶ್ವಾಸದ ಬಲದಿಂದ ಗೆದ್ದು ಬರೋದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

ಆಸೀಸ್ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ಆರಂಭಿಕ ಆಟಗಾರ ಶಿಖರ್ ಧವನ್​ಗೆ ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details