ಕರ್ನಾಟಕ

karnataka

ETV Bharat / sports

WTC ಫೈನಲ್​ನಲ್ಲಿ 2 ಬಾರಿ ಕೊಹ್ಲಿ ವಿಕೆಟ್​ ಪಡೆದಿದ್ದು ಗ್ರೇಟ್​: ಕೈಲ್ ಜೆಮೀಸನ್​

ಆರ್​ಸಿಬಿ ಪರ ಕೊಹ್ಲಿ ನಾಯಕತ್ವದಲ್ಲಿ ಆಡುವ ಆಲ್‌ರೌಂಡರ್ ಕೈಲ್ ಜೇಮಿಸನ್ ಫೈನಲ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಮತ್ತು 2ನೇ ಇನ್ನಿಂಗ್ಸ್​ನಲ್ಲಿ ಪ್ರಮುಖ 2 ವಿಕೆಟ್​ ಪಡೆದು ನ್ಯೂಜಿಲ್ಯಾಂಡ್​ ಗೆಲುವಿನಲ್ಲಿನ ಪ್ರಮುಖ ಪಾತ್ರವಹಿಸಿದ್ದರು. ವಿಶೇಷವಾಗಿ ಭಾರತ ತಂಡದ ನಾಯಕ ಕೊಹ್ಲಿ ಅವರನ್ನು 2 ಬಾರಿ ಔಟ್ ಮಾಡಿದ್ದರು. ಎರಡೂ ಸಂದರ್ಭದಲ್ಲಿ ಮೊದಲ 10 ಓವರ್​ ಒಳಗೆ ಕೊಹ್ಲಿ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು.

ವಿರಾಟ್ ಕೊಹ್ಲಿ vs ಕೈಲ್ ಜೆಮೀಸನ್
ವಿರಾಟ್ ಕೊಹ್ಲಿ vs ಕೈಲ್ ಜೆಮೀಸನ್

By

Published : Jun 24, 2021, 8:11 PM IST

ಸೌತಾಂಪ್ಟನ್: ಬುಧವಾರ ಕೊನೆಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಎರಡೂ ಇನ್ನಿಂಗ್ಸ್​ನಲ್ಲಿ ಔಟ್ ಮಾಡಿದ್ದು ಅದ್ಭುತ ಎನಿಸುತ್ತಿದೆ ಎಂದು ನ್ಯೂಜಿಲೆಂಡ್ ವೇಗಿ ಕೈಲ್ ಜೆಮೀಸನ್ ಹೇಳಿದ್ದಾರೆ.

ಆರ್​ಸಿಬಿ ಪರ ಕೊಹ್ಲಿ ನಾಯಕತ್ವದಲ್ಲಿ ಆಡುವ ಆಲ್‌ರೌಂಡರ್ ಕೈಲ್ ಜೇಮಿಸನ್ ಫೈನಲ್​ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಮತ್ತು 2ನೇ ಇನ್ನಿಂಗ್ಸ್​ನಲ್ಲಿ ಪ್ರಮುಖ 2 ವಿಕೆಟ್​ ಪಡೆದು ನ್ಯೂಜಿಲ್ಯಾಂಡ್​ ಗೆಲುವಿನಲ್ಲಿನ ಪ್ರಮುಖ ಪಾತ್ರವಹಿಸಿದ್ದರು. ವಿಶೇಷವಾಗಿ ಭಾರತ ತಂಡದ ನಾಯಕ ಕೊಹ್ಲಿ ಅವರನ್ನು 2 ಬಾರಿ ಔಟ್ ಮಾಡಿದ್ದರು. ಎರಡೂ ಸಂದರ್ಭದಲ್ಲಿ ಮೊದಲ 10 ಓವರ್​ ಒಳಗೆ ಕೊಹ್ಲಿ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು.

ಇದೊಂದು ದೊಡ್ಡ ಕ್ಷಣವಾಗಿದೆ. ತಂಡದ ಇತರ ಬೌಲರ್​ಗಳ ಜೊತೆಗೆ ಕೆಲಸ ಮಾಡಿದ್ದು ನನ್ನ ಸಾಧನೆಗೆ ನೆರವಾಗಿದೆ. ವಿರಾಟ್​ ಕೊಹ್ಲಿ ವಿಶ್ವದರ್ಜೆಯ ಆಟಗಾರ. ಅವರ ಜೊತೆ ಆರ್​ಸಿಬಿಯಲ್ಲಿ ಅವರ ವಿರುದ್ಧ ಬೌಲಿಂಗ್ ಮಾಡಿದ್ದು ಕೆಲವು ಅನುಭವ ನನಗೆ ನೆರವಾಯಿತು. ಟೆಸ್ಟ್​ ಪಂದ್ಯದಲ್ಲಿ ಅವರ ವಿಕೆಟ್​ ಎರಡು ಬಾರಿ ಪಡೆಯುವುದು ನಿಜಕ್ಕೂ ಅದ್ಭುತ ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಜೆಮೀಸನ್ ಹೇಳಿದ್ದಾರೆ.

ಭಾರತ ನೀಡಿದ್ದ 139 ರನ್​ಗಳ ಸಾಧಾರಣ ಗುರಿಯನ್ನು ನ್ಯೂಜಿಲ್ಯಾಂಡ್ ತಂಡ ಕೇನ್ ವಿಲಿಯಮ್ಸನ್(52)​ ಮತ್ತು ರಾಸ್ ಟೇಲರ್(47) ಅದ್ಭುತ ಜೊತೆಯಾಟದಿಂದ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿತ್ತು.

ಇದನ್ನು ಓದಿ:WTC records: ಅಶ್ವಿನ್, ಲಾಬುಶೇನ್ ಸೇರಿದಂತೆ ಟೂರ್ನಿಯಲ್ಲಿನ ವೈಯಕ್ತಿಕ ದಾಖಲೆಗಳ ವಿವರ ಇಲ್ಲಿದೆ

ABOUT THE AUTHOR

...view details