ನವದೆಹಲಿ:ಪ್ರಸ್ತುತ ಕ್ರಿಕೆಟ್ನಲ್ಲಿರುವ ಸ್ಪಿನ್ ಶ್ರೇಷ್ಠರಲ್ಲಿ ಒಬ್ಬರಾಗಿರುವ ಯುಜವೇಂದ್ರ ಚಹಾಲ್ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಭಾರತದ ಪರ ವೇಗವಾಗಿ 50 ಟಿ-20 ವಿಕೆಟ್, ಟಿ-20 ಹಾಗೂ ಏಕದಿನ ಎರಡರಲ್ಲೂ 6 ವಿಕೆಟ್ ಸಾಧನೆ ಮಾಡಿರುವ ವಿಶ್ವದ 2ನೇ ಬೌಲರ್ ಆಗಿರುವ ಯಜುವೇಂದ್ರ ಚಹಾಲ್ ತಮ್ಮ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಶಿಖರ್ ಧವನ್, ಕುಲ್ದೀಪ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರು ಶುಭ ಕೋರಿದ್ದಾರೆ.
ಅದರಲ್ಲೂ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮದೇ ಆದ ಹಾಸ್ಯ ಶೈಲಿಯಲ್ಲಿ ಶುಭ ಕೋರಿದ್ದಾರೆ. "ಯಜವೇಂದ್ರ ಚಹಾಲ್ ಅಥವಾ ನಾನು ನಿನ್ನನ್ನು ಮಿಸ್ಟರ್ ಚುಹಾ(ಇಲಿ) ಎಂದು ಕರೆಯಬಹುದೇ. ಸ್ವಲ್ಪ ತೂಕವನ್ನು ಹೆಚ್ಚಿಕೊಳ್ಳಿ ಎಂದು ವಿಶೇಷವಾಗಿ ಆಶಿಸುತ್ತೇನೆ. ಹೀಗೆ ನಿನ್ನ ತಮಾಶೆಯ ವಿಡಿಯೋ ಹಾಗೂ ಕಾಮೆಂಟ್ಗಳ ಮೂಲಕ ರಂಜಿಸುವುದನ್ನು ಮುಂದುವರಿಸಿ. ನಿಮ್ಮ ಮುಂದಿನ ದಿನಗಳು ಯಶಸ್ಸಿನಿಂದ ಕೂಡಿರಲಿ. ಜನ್ಮ ದಿನದ ಶುಭಾಶಯ ಎಂದು ಟ್ವೀಟ್ ಮಾಡಿದ್ದಾರೆ.