ನವದೆಹಲಿ:ವಾರದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಟೀಮ್ ಇಂಡಿಯಾದ ಎಡಗೈ ಆಟಗಾರ ಯುವರಾಜ್ ಸಿಂಗ್ ಸದ್ಯದಲ್ಲೇ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.
ವಿಶ್ವಕಪ್ ಹೀರೋ ಯುವಿ ಭಾರತದ ಜೆರ್ಸಿ ತೊಡುತ್ತಿಲ್ಲ, ಬದಲಾಗಿ ಕೆನಡಾ ಗ್ಲೋಬಲ್ ಟಿ20 ಲೀಗ್ನಲ್ಲಿ ಟೊರಾಂಟೋ ಇಂಟರ್ನ್ಯಾಷನಲ್ ಪರವಾಗಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.
ಕೆನಡಾ ಗ್ಲೋಬಲ್ ಟಿ20 ತಮ್ಮ ಟ್ವಿಟರ್ ಖಾತೆಯಲ್ಲಿ ಯುವಿ ಆಗಮನದ ಬಗ್ಗೆ ಪೋಸ್ಟ್ ಮಾಡಿದ್ದು, ಈ ಮೂಲಕ ಖ್ಯಾತ ಆಲ್ರೌಂಡರ್ ಟಿ20 ಲೀಗ್ ಆಡೋದು ಪಕ್ಕಾ ಆಗಿದೆ. ಇದು ಯುವರಾಜ್ ಸಿಂಗ್ ಫ್ಯಾನ್ಸ್ಗೆ ಎಂದು ತಮ್ಮ ಟ್ವಿಟರ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ವೇಳೆ ಟಿ20 ಲೀಗ್ ಆಡಲು ಆಸಕ್ತಿ ಇದೆ. ಇದಕ್ಕಾಗಿ ಬಿಸಿಸಿಐ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು.
ಯುವರಾಜ್ ಹೊರತಾಗಿ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಸಹ ಸಹಿ ಹಾಕಿದ್ದಾರೆ. ಇನ್ನುಳಿದಂತೆ ಬ್ರೆಂಡನ್ ಮೆಕ್ಕಲಂ, ಕ್ರಿಸ್ ಲಿನ್, ಶೋಯೆಬ್ ಮಲಿಕ್, ಫಫ್ ಡು ಪ್ಲೆಸಿಸ್, ಶಕಿಬ್ ಅಲ್ ಹಸನ್, ಕಾಲಿನ್ ಮುನ್ರೋ ಸಹ ಈ ಟಿ20 ಲೀಗ್ನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ಆಟಗಾರರಾಗಿದ್ದಾರೆ.