ಕರ್ನಾಟಕ

karnataka

ETV Bharat / sports

6 ಬಾಲಿಗೆ 6 ಸಿಕ್ಸರ್​: 13 ವರ್ಷಗಳ ಸಂಭ್ರಮ ಹಂಚಿಕೊಂಡ ಯುವಿ - ಭಾರತ ಇಂಗ್ಲೆಂಡ್​ ಟಿ20 ವಿಶ್ವಕಪ್​ 2007

ಆ ಪಂದ್ಯದಲ್ಲಿ ಯುವರಾಜ್​ ಸಿಂಗ್ (58) ಕೇವಲ 12 ಎಸತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಗೌತಮ್ ಗಂಭೀರ್ 58, ವೀರೇಂದ್ರ ಸೆಹ್ವಾಗ್ 68 ರನ್ ಸಿಡಿಸಿದ್ದರು. ಈ ಮೂವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲಂಡ್ 20 ಓವರ್‌ಗೆ 6 ವಿಕೆಟ್ ಕಳೆದು 200 ರನ್ ಗಳಿಸಿ 18 ರನ್‌ಗಳ ಸೋಲುಕಂಡಿತ್ತು.

ಯುವರಾಜ್​ ಸಿಂಗ್​  6 ಬಾಲಿಗೆ 6 ಸಿಕ್ಸರ್
ಯುವರಾಜ್​ ಸಿಂಗ್​ 6 ಬಾಲಿಗೆ 6 ಸಿಕ್ಸರ್

By

Published : Sep 19, 2020, 4:52 PM IST

ನವದೆಹಲಿ: ಭಾರತ ತಂಡ ಆಲ್​ರೌಂಡರ್​ ಯುವರಾಜ್​ ಸಿಂಗ್​ ಟಿ20 ಕ್ರಿಕೆಟ್​ ಇತಿಹಾಸದಲ್ಲಿ 6 ಬಾಲಿಗೆ 6 ಸಿಕ್ಸರ್ಸ್​ ಸಿಡಿಸಿ ಇಂದಿಗೆ 13 ವರ್ಷಗಳು ತುಂಬಿವೆ. ಈ ಮಧುರ ನೆನೆಪನ್ನು ಸಾಮಾಜಿಕ ಜಾಲಾತಾಣದಲ್ಲಿ ಯುವಿ ಶೇರ್​ ಮಾಡಿಕೊಂಡಿದ್ದಾರೆ.

2007ರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡ ಸ್ಟುವರ್ಟ್​ ಬ್ರಾಡ್​ ಎಸೆದ ಓವರ್​ನಲ್ಲಿ ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿ ಕ್ರಿಕೆಟ್​ ಲೋಕವನ್ನೇ ಯುವರಾಜ್​ ಸಿಂಗ್​ ಬೆಚ್ಚಿ ಬೆರಗಾಗುವಂತೆ ಮಾಡಿದ್ದರು.

ಈ ಮಧುರ ಕ್ಷಣವನ್ನು ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿರುವ ಲೆಜೆಂಡ್​, "13 ವರ್ಷಗಳು, ಸಮಯ ಹೇಗೆ ಹಾರುತ್ತಿದೆ" ಎಂದು ಕಾಮೆಂಟ್​ ಮಾಡಿಕೊಂಡಿದ್ದಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿರುವ ಸಿಕ್ಸರ್ಸ್​ ಹೊಡೆಸಿಕೊಂಡಿದ್ದ ಬ್ರಾಡ್​, ಸಮಯ​ ಆ ರಾತ್ರಿ ಚೆಂಡು ಹಾರುತ್ತಿದ್ದಕ್ಕಿಂತಲೂ ವೇಗವಾಗಿ ಹಾರುತ್ತಿದೆ" ಎಂದಿದ್ದಾರೆ. ಇದಕ್ಕೆ ಮತ್ತೆ ಯುವಿ ಕೂಡ ತಮಾಷೆಯಿಂದಲೇ ಉತ್ತಿರಿಸಿದ್ದು, ಆ ಒಂದು ರಾತ್ರಿ ನಾವು ಮರೆಯಲಾಗುವುದಿಲ್ಲ ಗೆಳೆಯ ಎಂದು ಕಾಲೆಳೆದಿದ್ದಾರೆ.

ಯುನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ಕೂಡ ಲೆಜೆಂಡರಿ ಎಂದು ಕಾಮೆಂಟ್​ ಮಾಡಿದ್ದಾರೆ. ಭಾರತ ತಂಡದ ಮಾಜಿ ಆಟಗಾರ ಗಂಭೀರ್​, ಹರ್ಭಜನ್​ ಸಿಂಗ್ ಸೇರಿದಂತೆ ಹಲವಾರು ಕ್ರಿಕೆಟ್​ ದಿಗ್ಗಜರು ಇದು ಅದ್ಭುತ ನೆನೆಪು ಎಂದು ಕಾಮೆಂಟ್ ಮಾಡಿದ್ದಾರೆ.

ಆ ಪಂದ್ಯದಲ್ಲಿ ಯುವರಾಜ್​ ಸಿಂಗ್ (58) ಕೇವಲ 12 ಎಸತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಗೌತಮ್ ಗಂಭೀರ್ 58, ವೀರೇಂದ್ರ ಸೆಹ್ವಾಗ್ 68 ರನ್ ಸಿಡಿಸಿದ್ದರು. ಈ ಮೂವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲಂಡ್ 20 ಓವರ್‌ಗೆ 6 ವಿಕೆಟ್ ಕಳೆದು 200 ರನ್ ಗಳಿಸಿ 18 ರನ್‌ಗಳ ಸೋಲುಕಂಡಿತ್ತು.

ABOUT THE AUTHOR

...view details