ಹೈದರಾಬಾದ್: ಆಸ್ಟ್ರೇಲಿಯಾ ಕ್ರಿಕೆಟಿಗರಾದ ರಿಕಿ ಪಾಟಿಂಗ್ ಮತ್ತು ಶೇನ್ ವಾರ್ನ್ ಆಯೋಜಿಸಿರುವ ಬುಷ್ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.
ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ನಿರ್ಧರಿಸಿ ಈ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯ ಟಿಕೆಟ್ನಿಂದ ಸಂಗ್ರಹಿಸಿದ ಹಣವು ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಮನೆಗಳ ಪುನರ್ವಸತಿಗೆ ಬಳಸಲು ನಿರ್ಧರಿಸಲಾಗಿದೆ.
ಈಗಾಗಲೇ ಹಲವು ಕ್ರಿಕೆಟ್ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದು, ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಬುಷ್ಫೈರ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ.
ರಿಕಿ ಪಾಟಿಂಗ್ ಮತ್ತು ಶೇನ್ ವಾರ್ನ್ ಯೋಚನೆಗೆ ಸಚಿನ್ ಕೂಡ ಕೈ ಜೋಡಿಸಿದ್ದಾರೆ. ಫೆಬ್ರವರಿ 8 ರಂದು ಬುಷ್ಫೈರ್ ಕ್ರಿಕೆಟ್ ಬ್ಯಾಷ್ ನಡೆಯಲಿದ್ದು, ರಿಕಿ ಪಾಂಟಿಂಗ್ ತಂಡಕ್ಕೆ ಸಚಿನ್ ಕೋಚ್ ಆದ್ರೆ, ಶೇನ್ ವಾರ್ನ್ ತಂಡಕ್ಕೆ ವೆಸ್ಟ್ ಇಂಡೀಸ್ ಕೌರ್ಟ್ನಿ ವಾಲ್ಷ್ ತರಬೇತಿ ನೀಡಲಿದ್ದಾರೆ.