ಕರ್ನಾಟಕ

karnataka

ETV Bharat / sports

ಸೋತರು, ಗೆದ್ದರೂ ಎದುರಾಳಿ ಆಟಗಾರರು ಹಾಗೂ ಆ ರಾಷ್ಟ್ರವನ್ನು ಗೌರವಿಸಬೇಕು: ಅಜಿಂಕ್ಯ ರಹಾನೆ

ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ ರಹಾನೆ 2-1ರಲ್ಲಿ ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು. ನಂತರ ಅವರು ಭಾರತಕ್ಕೆ ಆಗಮಿಸಿದ ವೇಳೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ನೆರೆಹೊರೆಯವರು ಸಂಭ್ರಮದ ಭಾಗವಾಗಿ ಕಾಂಗರೂ ಆಕೃತಿಯುಳ್ಳ ಕೇಕ್​ ಅನ್ನು ತಂದಿದ್ದರು. ಆದರೆ ಜಂಟಲ್​ಮ್ಯಾನ್ ರಹಾನೆ ಅದನ್ನು ಕತ್ತರಿಸಲು ನಿರಾಕರಿಸಿದರು.

ಅಜಿಂಕ್ಯ ರಹಾನೆ ನ್ಯೂಸ್​
ಅಜಿಂಕ್ಯ ರಹಾನೆ ನ್ಯೂಸ್​

By

Published : Jan 30, 2021, 1:58 PM IST

ಮುಂಬೈ: ನಾವು ಎದುರಾಳಿ ವಿರುದ್ಧ ಗೆದ್ದರೂ ಅಥವಾ ಸೋತರೂ ಇಲ್ಲವೇ ಇತಿಹಾಸ ನಿರ್ಮಿಸಿದರೆ ಉತ್ತಮ. ಆದರೆ, ನಾವು ಎದುರಾಳಿಯನ್ನು ಗೌರವದಿಂದ ಕಾಣಬೇಕು. ಹಾಗಾಗಿ ತಾವೂ ತಮ್ಮನ್ನು ಸ್ವಾಗತಿಸಿದ ದಿನ ಕೇಕ್​ ಕಟ್​ ಮಾಡಲು ನಿರಾಕರಿಸಿದೆ ಎಂದು ಟೀಮ್ ಇಂಡಿಯಾದ ಟೆಸ್ಟ್​ ಉಪನಾಯಕ ಅಜಿಂಕ್ಯಾ ರಹಾನೆ ತಿಳಿಸಿದ್ದಾರೆ.

ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದ ರಹಾನೆ 2-1ರಲ್ಲಿ ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು. ನಂತರ ಅವರು ಭಾರತಕ್ಕೆ ಆಗಮಿಸಿದ ವೇಳೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಈ ಸಂದರ್ಭದಲ್ಲಿ ನೆರೆಹೊರೆಯವರು ಸಂಭ್ರಮದ ಭಾಗವಾಗಿ ಕಾಂಗರೂ ಆಕೃತಿಯುಳ್ಳ ಕೇಕ್​ ಅನ್ನು ತಂದಿದ್ದರು. ಆದರೆ ಜಂಟಲ್​ಮ್ಯಾನ್ ರಹಾನೆ ಅದನ್ನು ಕತ್ತರಿಸಲು ನಿರಾಕರಿಸಿದರು.

ಈ ಕುರಿತು ಕಾಮೆಂಟೇಟರ್​ ಹರ್ಷ ಬೋಗ್ಲೆ ನಡೆಸಿದ ಫೇಸ್​ಬುಕ್ ಸಂವಾದದ ವೇಳೆ ಕೇಕ್​ ಕಟ್​ ಮಾಡದಿರಲು ಕಾರಣ ಏನೆಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ರಹಾನೆ, ಎದುರಾಳಿಗಳ ಸಂಸ್ಕೃತಿಯನ್ನು ನಾವು ಗೌರವಿಸಬೇಕು ಎಂದಿದ್ದಾರೆ.

" ಕಾಂಗರೂ ಅವರ(ಆಸ್ಟ್ರೇಲಿಯಾ) ರಾಷ್ಟ್ರೀಯ ಪ್ರಾಣಿ. ಹಾಗಾಗಿ ನಾನು ಕೇಕ್ ಕಟ್ ಮಾಡಲು ಬಯಸಲಿಲ್ಲ. ನೀವು ನಿಮ್ಮ ಎದುರಾಳಿಗಳನ್ನೂ ಗೌರವದಿಂದ ಕಾಣಬೇಕು. ನೀವು ಗೆದ್ದರೆ ಅಥವಾ ಸೋತರೂ ಅಥವಾ ಇತಿಹಾಸ ನಿರ್ಮಿಸಿದರೂ ಒಳ್ಳೆಯದು, ಆದರೆ ನೀವು ಬೇರೆ ರಾಷ್ಟ್ರಗಳನ್ನು ಗೌರವಿಸಬೇಕು ಹಾಗಾಗಿ ನಾನು ಕಾಂಗರೂ ಆಕೃತಿಯುಳ್ಳ ಕೇಕ್ ಕಟ್ ಮಾಡಲಿಲ್ಲ" ಎಂದು ರಹಾನೆ ವಿವರಿಸಿದ್ದಾರೆ.

ಇದನ್ನು ಓದಿ: ಕೊಹ್ಲಿ ಪಡೆ ವಿರುದ್ಧ 'ಅತ್ಯುತ್ತಮ ಎಸೆತ' ಪ್ರಯೋಗಿಸಿದ್ರೆ ಮಾತ್ರ ಯಶಸ್ಸು ಸಾಧ್ಯ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್​

ABOUT THE AUTHOR

...view details