ಕರ್ನಾಟಕ

karnataka

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಫೈನಲ್ ಪ್ರವೇಶಿಸಲು ಭಾರತಕ್ಕಿದೆ ದೊಡ್ಡ ಸವಾಲು

By

Published : Dec 17, 2020, 12:05 PM IST

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಉತ್ತಮ ಸರಾಸರಿಯೊಂದಿಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಅಗ್ರ ಎರಡು ಸ್ಥಾನದಲ್ಲಿವೆ. ಭಾರತ ತಂಡ ಫೈನಲ್ ಪ್ರವೇಶಿಸಬೇಕಾದರೆ ಆಸೀಸ್ ಮತ್ತು ಆಂಗ್ಲರ ವಿರುದ್ಧ ಉತ್ತಮ ಪ್ರದರ್ಶನ ತೋರುವ ಅಗತ್ಯವಿದೆ.

World Test Championship
ಭಾರತ ಕ್ರಿಕೆಟ್ ತಂಡ

ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಸ್ಪರ್ಧೆ ಹತ್ತಿರವಾಗುತ್ತಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರುವ ಅಗತ್ಯವಿದೆ.

ಐಸಿಸಿ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ಭಾರತ 114 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 116.46 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ 116.37 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ವೆಸ್ಟ್ ಇಂಡೀಸ್ ವಿರುದ್ಧ ಸತತವಾಗಿ ಇನ್ನಿಂಗ್ಸ್​ ಜಯಗಳಿಸಿದ ನಂತರ ಕಿವೀಸ್, 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಬಹಳ ಹತ್ತಿರದಲ್ಲಿದೆ.

ಡಿಸೆಂಬರ್ 26 ರಿಂದ ಪ್ರಾರಂಭವಾಗುವ ಎರಡು ಟೆಸ್ಟ್ ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನದ ವಿರುದ್ಧ 2-0 ಅಂತರದಲ್ಲಿ ಸರಣಿ ಜಯಿಸಿದರೆ, 420 ಅಂಕಗಳನ್ನು ಗಳಿಸುತ್ತಾರೆ.

ಒಂದು ವೇಳೆ ಕಿವೀಸ್ ಪಾಕ್ ವಿರುದ್ಧ ಸರಣಿ ಕ್ಲೀನ್ ಸ್ಪೀಪ್ ಮಾಡಿದ್ರೆ, ಭಾರತ ಕೊನೇಯ 8 ಟೆಸ್ಟ್ ಪಂದ್ಯಗಳಲ್ಲಿ 5 ಗೆಲುವು ಅಥವಾ 4 ಗೆಲುವು ಮತ್ತು 3 ಪಂದ್ಯ ಡ್ರಾ ಸಾಧಿಸಲೇ ಬೇಕು. ಇದರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಪಂದ್ಯಗಳೂ ಸೇರಿರುವ ಕಾರಣ, ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಬೇಕಿದೆ.

"ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ನೀಡುವ ಪ್ರದರ್ಶನ ಮತ್ತು ಪಾಕಿಸ್ತಾನ ವಿರುದ್ಧದ ನ್ಯೂಜಿಲ್ಯಾಂಡ್ ಸರಣಿಯ ಫಲಿತಾಂಶದ ಮೇಲೆ ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್​ಗೆ ಅಗ್ರಸ್ಥಾನ ಸಿಗುವ ಬಗ್ಗೆ ಖಚಿತವಾಗಲಿದೆ" ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಉಂಟಾದ ತೊಂದರೆಯಿಂದ ಮೊದಲೇ ಘೋಷಿಸಲಾದ ಪಾಯಿಂಟ್‌ಗಳ ವ್ಯವಸ್ಥೆಯಲ್ಲಿನ ಬದಲಾವಣೆಯ ನಂತರ, ಗರಿಷ್ಠ ಅಂಕ ಪಡೆದಿರುವ ತಂಡದ ಬದಲು ಗರಿಷ್ಠ ಗೆಲುವಿನ ಸರಾಸರಿ ಹೊಂದಿರುವ ತಂಡಗಳು ಫೈನಲ್​ ಪ್ರವೇಶಿಸಲಿವೆ.

ABOUT THE AUTHOR

...view details