ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು... ಹಿರಿಯರ ಮೊರೆ ಹೋದ ಪಾಕಿಸ್ತಾನ!

ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದೂ ಪಂದ್ಯ ಗೆಲ್ಲದೇ ನಿರಾಸೆಯನುಭವಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಮರಳಿ ಹಿರಿಯ ಆಟಗಾರರಿಗೆ ಮಣೆ ಹಾಕಿದೆ.

ಪಾಕಿಸ್ತಾನ

By

Published : May 21, 2019, 12:07 PM IST

ಲಂಡನ್​: ಸಾಲು ಸಾಲು ಸೋಲಿನಿಂದ ಕಂಗೆಟ್ಟ ಪಾಕಿಸ್ತಾನ ತನ್ನ ವಿಶ್ವಕಪ್​ ತಂಡದಲ್ಲಿ ಮಹತ್ತರ ಬದಲಾವಣೆ ತಂದಿದ್ದು, ಹಿರಿಯ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡು ಅನನುಭವಿಗಳಿಗೆ ಗೇಟ್​ಪಾಸ್​ ನೀಡಿದೆ.

ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದೂ ಪಂದ್ಯ ಗೆಲ್ಲದೇ ನಿರಾಸೆಯನುಭವಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಮರಳಿ ಹಿರಿಯ ಆಟಗಾರರಿಗೆ ಮಣೆ ಹಾಕಿದೆ.

ಕಳೆದ ತಿಂಗಳು ವಿಶ್ವಕಪ್​ ಮಹಾ ಟೂರ್ನಿಗೆ 15 ಸದಸ್ಯರ ತಂಡವನ್ನು ಘೋಷಿಸಿದ್ದ ಪಿಸಿಬಿ ಹಿರಿಯರಾದ ಅಮಿರ್​, ವಹಾಬ್​ ರಿಯಾಜ್ ಹಾಗೂ ಸ್ಫೋಟಕ ಆಟಗಾರ ಆಸಿಫ್​ ಅಲಿಯನ್ನು ವಿಶ್ವಕಪ್​ಗೆ ಆಯ್ಕೆಮಾಡಿರಲಿಲ್ಲ.

ಆಸಿಫ್​ ಅಲಿ

ಇಂಗ್ಲೆಂಡ್​ ವಿರುದ್ಧ 4-0 ದಿಂದ ಸೋಲನುಭವಿಸಿದ ಮೇಲೆ ಅನನುಭವಿಗಳಾದ ಅಬಿದ್ ಅಲಿ, ಜುನೈದ್​ ಖಾನ್​​ ಹಾಗೂ ಫಾಹೀಮ್​ ಅ​ಶ್ರಫ್​​ರನ್ನು ತಂಡದಿಂದ ಕೈಬಿಟ್ಟು ಹಿರಿಯ ಆಟಗಾರರನ್ನು ಮತ್ತೆ ಕರೆಸಿಕೊಂಡಿದೆ.

ಅಮೀರ್ 2017ರಲ್ಲಿ ಇಂಗ್ಲೆಂಡ್​ನಲ್ಲೇ ನಡೆದಿದ್ದ ಚಾಂಪಿಯನ್​ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಇನ್ನು ಆಸಿಫ್​ ಅಲಿ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಆಟಗಾರನಾಗಿದ್ದು, ಪಿಎಸ್​ಎಲ್​ ಹಾಗೂ ಇಂಗ್ಲೆಂಡ್​ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಬೆನ್ನಲ್ಲೇ ತಂಡಕ್ಕೆ ವಾಪಸ್​ ಕರೆಸಿಕೊಂಡಿದ್ದಾರೆ. ಇನ್ನು ವಹಾಬ್​ ರಿಯಾಜ್​ರನ್ನು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ. ರಿಯಾಜ್​ ಇಂಗ್ಲೆಂಡ್​ನಲ್ಲಿ ನಡೆಯುವ ನಾಟ್​ವೆಸ್ಟ್​​ ಟಿ-20 ಬ್ಲಾಸ್ಟ್​ನಲ್ಲಿ ಕಳೆದರೆಡು ವರ್ಷಗಳಿಂದ ಸಕ್ರಿಯರಾಗಿದ್ದು ಉತ್ತಮ ಪ್ರದರ್ಶನ ತೋರಿಸುತ್ತಿದ್ದಾರೆ.

ABOUT THE AUTHOR

...view details