ಲಂಡನ್:ದಕ್ಷಿಣ ಆಫ್ರಿಕಾದ ಓಪನಿಂಗ್ ಬ್ಯಾಟ್ಸ್ಮನ್ ಹಾಶೀಂ ಆಮ್ಲಾ ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಅತಿ ವೇಗವಾಗಿ ಈ ರೆಕಾರ್ಡ್ ಬರೆದ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 25ರನ್ಗಳಿಕೆ ಮಾಡುತ್ತಿದ್ದಂತೆ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ವೇಗವಾಗಿ 8 ಸಾವಿರ ರನ್ ಪೂರೈಕೆ ಮಾಡಿರುವ 2ನೇ ಪ್ಲೇಯರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಈ ದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ 175 ಇನ್ನಿಂಗ್ಸ್ಗಳಿಂದ 8 ಸಾವಿರ ರನ್ ಪೂರೈಸಿದ್ದರೆ, ಆಮ್ಲಾ 176 ಇನ್ನಿಂಗ್ಸ್ಗಳಿಂದ ಇಷ್ಟೊಂದು ರನ್ ಪೂರೈಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಪರ ಅತಿ ವೇಗವಾಗಿ 8 ಸಾವಿರ ರನ್ ಪೂರೈಕೆ ಮಾಡಿರುವ ಮೊದಲ ಪ್ಲೇಯರ್ ಎಂಬ ದಾಖಲೆ ಸಹ ಅವರ ಹೆಸರಿಗೆ ನೋಂದಣಿಯಾಗಿದೆ.