ಕರ್ನಾಟಕ

karnataka

ETV Bharat / sports

'ಪಾಕ್​ ಕೋಚ್ ಆದರೆ ಅವರಿಗೆ ಬ್ಯಾಟಿಂಗ್​​ ಸಲಹೆ ನೀಡುವೆ': ಪತ್ರಕರ್ತನ ಪ್ರಶ್ನೆಗೆ ರೋಹಿತ್​ ಉತ್ತರ! - ಪತ್ರಕರ್ತನ ಪ್ರಶ್ನೆ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್​ ಶರ್ಮಾ ಅಬ್ಬರಿಸಿದ್ದು, ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಕೇಳಿರುವ ಪ್ರಶ್ನೆಯೊಂದಕ್ಕೆ ಹಾಸ್ಯಾಸ್ಪದ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ರೋಹಿತ್​ ಶರ್ಮಾ

By

Published : Jun 17, 2019, 4:03 PM IST

ಮ್ಯಾಂಚೆಸ್ಟರ್ ​(ಇಂಗ್ಲೆಂಡ್​):ವಿಶ್ವಕಪ್​​ನಲ್ಲಿ ಕೊಹ್ಲಿ ಪಡೆ ಸೋಲಿಲ್ಲದ ಸರದಾರನಾಗಿ ಮುನ್ನುಗುತ್ತಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ನಿನ್ನೆ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲು ಮಾಡಿದೆ. ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಪಾಕ್​ ಬೌಲರ್​ಗಳನ್ನ ಹಿಗ್ಗಾಮುಗ್ಗಾ ಥಳಿಸಿ ಕೇವಲ 113 ಎಸೆತಗಳಲ್ಲಿ 140ರನ್​ಗಳಿಕೆ ಮಾಡಿದ್ದರು.

ತಂಡ 89 ರನ್​ಗಳ ಗೆಲುವು ದಾಖಲು ಮಾಡುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ರೋಹಿತ್​ ಶರ್ಮಾ, ಪಾಕ್​ ಪತ್ರಕರ್ತ ಕೇಳಿರುವ ಪ್ರಶ್ನೆಯೊಂದಕ್ಕೆ ಹಾಸ್ಯಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪಾಕಿಸ್ತಾನದ ಪತ್ರಕರ್ತ, ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ್ದಕ್ಕೆ ಅಭಿನಂದನೆಗಳು. ಕಳೆದ ಕೆಲ ತಿಂಗಳಿಂದ ಪಾಕಿಸ್ತಾನ ತಂಡ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ಅವರಿಗೆ ನೀವು ಏನು ಸಲಹೆ ನೀಡಲು ಬಯಸುತ್ತೀರಿ ಎಂದು ಕೇಳಿದ್ದಾರೆ.

ಇದಕ್ಕೆ ಹಾಸ್ಯಾತ್ಮಕವಾಗಿ ಉತ್ತರ ನೀಡಿರುವ ರೋಹಿತ್​, ಸದ್ಯ ನಾನು ಯಾವುದೇ ಸಲಹೆ ನೀಡುವುದಿಲ್ಲ. ಭವಿಷ್ಯದಲ್ಲಿ ಆ ತಂಡದ ಕೋಚ್​ ಆದರೆ, ಖಂಡಿತವಾಗಿ ಬ್ಯಾಟಿಂಗ್​ ಕೌಶಲ್ಯದ ಬಗ್ಗೆ ತಿಳಿಸುವೆ ಎಂದು ಹೇಳಿದ್ದಾರೆ. ವಿಶ್ವಕಪ್​​ನಲ್ಲಿ ಪಾಕ್​ ಈಗಾಗಲೇ ತಾನಾಡಿರುವ ಐದು ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದು, ಉಳಿದಂತೆ ಮೂರು ಪಂದ್ಯ ಸೋತಿದೆ. ಒಂದು ಪಂದ್ಯದಿಂದ ಯಾವುದೇ ಫಲಿತಾಂಶ ಹೊರಬಂದಿಲ್ಲ.

ABOUT THE AUTHOR

...view details