ಮೆಲ್ಬೋರ್ನ್: ಕೊರೊನಾದಿಂದಾಗಿ ಕೆಲವು ಕ್ರೀಡಾಕೂಟಗಳು ಮುಂದೂಡಲ್ಪಟ್ಟರೆ ಇನ್ನೂ ಕೆಲವು ಕ್ರೀಡಾಕೂಟಗಳು ರದ್ದಾಗಿದ್ದವು. ಆದರೆ ಟಿ20 ವಿಶ್ವಕಪ್ ಏನಾಗುವುದು ಎಂಬುದು ಕೂತೂಹಲಕಾರಿಯಾಗಿದೆ.
ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಿಂದ 18 ರಿಂದ ನವೆಂಬರ್ 15ರವರೆಗೆ ನಡೆಯಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದ ವಿಶ್ವಕಪ್ ಮುಂದೂಡಬಹುದಾ ಅಥವಾ ರದ್ದಾಗುವುದೇ ಎಂಬ ಗೊಂದಲದಲ್ಲಿದ್ದರೆ, ಐಸಿಸಿ ಮಾತ್ರ ಇನ್ನು ವಿಶ್ವಕಪ್ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಾಗುವುದಿಲ್ಲ ಎಂದು ಐಸಿಸಿ ಸ್ಪಷ್ಟನೆ ಪಡೆಸಿದೆ.
ಕೊರೊನಾ ಸೋಂಕು ಭೀತಿಯಿಂದ ಆಸ್ಟ್ರೇಲಿಯಾವು ತನ್ನ ಗಡಿಗಳನ್ನು ಮುಚ್ಚಿದ್ದು, ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ಟಿ-20 ವಿಶ್ವಕಪ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗುತ್ತದೆ ಅಥವಾ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಬೇಕಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.