ಲಂಡನ್:ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೋಲಿಲ್ಲದ ಸರದಾರನಾಗಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಈಗಾಗಲೇ ತಾನಾಡಿರುವ ಆರು ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲು ಮಾಡಿ, ಮತ್ತೊಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ.
ಭಾರತವನ್ನ ಯಾರು ಸೋಲಿಸ್ತಾರೋ ಅವರೇ ವಿಶ್ವಕಪ್ ಗೆಲ್ತಾರಂತೆ: ಇಂಗ್ಲೆಂಡ್ ಮಾಜಿ ಕ್ಯಾಪ್ಟನ್ ಭವಿಷ್ಯ - ಗೆಲುವು
ವಿಶ್ವಕಪ್ನಲ್ಲಿ ಕೊಹ್ಲಿ ಪಡೆ ವಿರುದ್ಧ ಯಾರು ಗೆಲುವು ದಾಖಲು ಮಾಡ್ತಾರೋ ಅವರೇ ಫೈನಲ್ ಪಂದ್ಯದಲ್ಲೂ ಜಯ ಸಾಧಿಸುತ್ತಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಭವಿಷ್ಯ ನುಡಿದಿದ್ದಾರೆ.
ಟೀಂ ಇಂಡಿಯಾ
ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲೂ ಬರೋಬ್ಬರಿ 125ರನ್ಗಳ ಗೆಲುವಿನ ನಗೆ ಬೀರಿದೆ. ಉಳಿದಂತೆ ಭಾರತ ಬಾಂಗ್ಲಾದೇಶ,ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ.
ಇದರ ಮಧ್ಯೆ ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕಲ್ ವಾನ್ ಭವಿಷ್ಯವೊಂದನ್ನ ನುಡಿದಿದ್ದಾರೆ. ಲೀಗ್ ಹಂತದಲ್ಲಿ ಅಥವಾ ಸೆಮಿಫೈನಲ್ನಲ್ಲಿ ಯಾರು ಟೀಂ ಇಂಡಿಯಾ ತಂಡವನ್ನ ಸೋಲಿಸುತ್ತಾರೋ ಅವರೇ ವಿಶ್ವಕಪ್ ಫೈನಲ್ನಲ್ಲೂ ಗೆಲುವು ದಾಖಲು ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಜತೆಗೆ ಇದೇ ವಿಷಯವನ್ನ ಟ್ವೀಟ್ ಕೂಡ ಮಾಡಿದ್ದಾರೆ.
Last Updated : Jun 29, 2019, 3:17 AM IST