ಸೌತಾಂಪ್ಟನ್: ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಈಗಾಗಲೆ ಇಂಗ್ಲೆಂಡ್ನಲ್ಲಿ ಅಭ್ಯಾಸ ನಡೆಸುತ್ತಿದೆ. ವೆಸ್ಟ್ ಇಂಡೀಸ್ ತಂಡದ ಆಟಗಾರ ಶಮರ್ ಬ್ರೂಕ್ಸ್ ಮುಂದಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಮ್ಮ ತಂಡ ಬ್ಯಾಟಿಂಗ್ ವಿಭಾಗವು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ವೇಗದ ಬೌಲಿಂಗ್ ತಮ್ಮ ಶಕ್ತಿ ಎಂದು ಬಲಗೈ ಬ್ಯಾಟ್ಸ್‌ಮನ್ ಒಪ್ಪಿಕೊಂಡಿದ್ದು, ಹಾಗೆಯೇ ನಾವು ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿದರೆ ಟೆಸ್ಟ್ ಪಂದ್ಯಗಳನ್ನು ಗೆಲ್ಲಬಹುದು ಎಂದಿದ್ದಾರೆ.
'ನಮ್ಮ ಬೌಲಿಂಗ್ ಶಕ್ತಿ ಏನೆಂಬುದು ನಮಗೆ ಗೊತ್ತಿದೆ, ಕಳೆದ ಎರಡು ವರ್ಷಗಳಿಂದ ಸಾಮರ್ಥ್ಯ ತೋರಿಸುತ್ತ ಬಂದಿದ್ದೇವೆ. ಆಂಗ್ಲರ ಬ್ಯಾಟಿಂಗ್ ಬಲ ನಮಗೆ ತಿಳಿದಿದ್ದು, ಅವರನ್ನು ಕಟ್ಟಿಹಾಕಿ ನಾವು ಪಂದ್ಯವನ್ನು ಗೆಲ್ಲುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುತ್ತಿದ್ದು, ತವರು ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಎದರಿಸುವುದು ಕಠಿಣ ಸವಾಲಾಗಿದೆ' ಎಂದು ಹೇಳಿದ್ದಾರೆ.
2020 ಮಾರ್ಚ್‌ನಿಂದ, ಕೊರೊನಾ ಸೋಂಕಿನಿಂದಾಗಿ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ರದ್ದುಗೊಂಡಿದ್ದವು. ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡ ಸೆಣಸಾಡಲಿವೆ. ಸರಣಿಯ ಮೊದಲ ಟೆಸ್ಟ್ ಜುಲೈ 8ರಂದು ಬುಧವಾರ ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯಲಿದೆ.