ಕರ್ನಾಟಕ

karnataka

ETV Bharat / sports

ಜಗತ್ತಿನ ಬೆಸ್ಟ್​ ಕ್ಯಾಪ್ಟನ್​ ನಮ್ಮ ತಂಡ ಮುನ್ನಡೆಸುತ್ತಿದ್ದಾರೆ: ಧೋನಿ ಬಗ್ಗೆ ಡ್ವೇನ್​ ಬ್ರಾವೋ ಮೆಚ್ಚುಗೆ - ಗೆಲುವು

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಧೋನಿ ಬಗ್ಗೆ ಸಹ ಆಟಗಾರ, ಆಲ್​ರೌಂಡರ್​ ಡ್ವೇನ್​ ಬ್ರಾವೋ ಮೆಚ್ಚುಗೆ ಮಾತನಾಡಿದ್ದು, ಜಗತ್ತಿನ ಬೆಸ್ಟ್​ ಕ್ಯಾಪ್ಟನ್​ ನಮ್ಮ ತಂಡ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.

ಸಿಎಸ್​ಕೆ ಪ್ಲೇಯರ್​ ಡ್ವೇನ್​ ಬ್ರಾವೋ,ಕ್ಯಾಪ್ಟನ್​ ಧೋನಿ

By

Published : Mar 27, 2019, 5:44 AM IST

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಹಾಲಿ ಚಾಂಪಿಯನ್​ ಸಿಎಸ್​ಕೆ ಉತ್ತಮ ಆರಂಭ ಪಡೆದುಕೊಂಡಿದೆ. ಟೂರ್ನಿಯಲ್ಲಿ ಈಗಾಗಲೇ ತಾನು ಆಡಿರುವ ಎರಡು ಪಂದ್ಯಗಳಲ್ಲೂ ಗೆಲುವು ದಾಖಲು ಮಾಡಿದೆ.

ನಿನ್ನೆ ಫಿರೋಜ್​ ಷಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್​ ವಿರುದ್ಧ ಗೆದ್ದ ಬಳಿಕ ತಂಡದ ಪ್ಲೇಯರ್​ ಡ್ವೇನ್​ ಬ್ರಾವೋ ಮಾತನಾಡಿದ್ದಾರೆ. ತಂಡವನ್ನ ವಿಶ್ವದ ಬೆಸ್ಟ್​ ಕ್ಯಾಪ್ಟನ್​ ಮುನ್ನಡೆಸುತ್ತಿದ್ದು, ಅದರ ಭಾಗವಾಗಿರುವುದು ನಿಜಕ್ಕೂ ಸಂತಸದ ಸಂಗತಿ ಎಂದಿದ್ದಾರೆ. ಮೈದಾನದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ ನಿಜಕ್ಕೂ ಉತ್ತಮವಾಗಿರುತ್ತವೆ.

ವಿಶ್ವವೇ ಧೋನಿಯನ್ನ ಕ್ಯಾಪ್ಟನ್​ ಕೂಲ್​ ಎಂದು ಕರೆಯುತ್ತದೆ. ಅದಕ್ಕೆ ಅವರು ಅರ್ಹವಾಗಿದ್ದಾರೆ. ಮೈದಾನದಲ್ಲಿ ನಮ್ಮ ತಂಡ ಫಾಸ್ಟೆಸ್ಟ್​ ತಂಡವಾಗಿಲ್ಲದಿರಬಹುದು ಆದರೆ ಸ್ಟಾರ್ಟೆಸ್ಟ್​ ತಂಡವಾಗಿದೆ ಎಂದಿದ್ದಾರೆ.12ನೇ ಆವೃತ್ತಿಯಲ್ಲಿ ಸಿಎಸ್​ಕೆ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ತದನಂತರ ಡೆಲ್ಲಿ ವಿರುದ್ಧ ಗೆಲುವು ದಾಖಲು ಮಾಡಿದೆ.

ABOUT THE AUTHOR

...view details