ನವದೆಹಲಿ :ಕ್ರಿಕೆಟ್ನಲ್ಲಿ ಅರ್ಧಶತಕ ಹಾಗೂ ಶತಕ ಸಿಡಿಸಿದ ಸಂದರ್ಭದಲ್ಲಿ ಬ್ಯಾಟ್ ಹಿಡಿದು ಕತ್ತಿ ಜಳಪಿಸುವಂತೆ ತಿರುಗಿಸುತ್ತಿದ್ದ ಜಡೇಜಾ ಇದೀಗ ನಿಜವಾದ ಕತ್ತಿಯನ್ನೇ ಕ್ಷತ್ರಿಯನಂತೆ ಬಳಸಿದ್ದನ್ನ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, " ಈ ಕತ್ತಿ ತನ್ನ ಹೊಳಪನ್ನು ಕಳೆದುಕೊಂಡಿರಬಹುದು. ಆದರೆ, ಅದು ತನ್ನ ಮಾಲೀಕನಿಗೆ ಯಾವತ್ತೂ ನಿಯತ್ತನ್ನು ಮೀರುವುದಿಲ್ಲ" ಎಂದು ಬರೆದುಕೊಂಡು ಕತ್ತಿವರಸೆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.