ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 14ನೇ ಆವೃತ್ತಿಗೂ ಮುನ್ನ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದು, ನೆಟ್ ಸೆಷನ್ ವೇಳೆ ಮೈದಾನದ ಸುತ್ತೆಲ್ಲಾ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದ್ದಾರೆ.
ಕಳೆದ ಐಪಿಎಲ್ನ ವೈಫಲ್ಯದಿಂದ ಹೊರಬರಲೆತ್ನಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉಳಿದ ತಂಡಗಳಿಗಿಂತಲೂ ಮುಂಚಿತವಾಗಿಯೇ ತರಬೇತಿ ಆರಂಭಿಸಿದೆ. ಪೂಜಾರ, ರೈನಾ, ಮೋಯಿನ್ ಅಲಿ ಸೇರಿದಂತೆ ಎಲ್ಲಾ ಆಟಗಾರರು ಚೆನ್ನೈಗೆ ಕಳೆದುಕೊಂಡಿರುವ ವೈಭವವನ್ನು ಮತ್ತೆ ತಂದುಕೊಡಲು ಉತ್ಸುಕರಾಗಿ ಕಾಯುತ್ತಿದ್ದಾರೆ. ಇದಕ್ಕೆ ಧೋನಿ ಕೂಡ ಹೊರತಾಗಿಲ್ಲ, ಅವರು ನೆಟ್ಸ್ನಲ್ಲಿ ಸತತವಾಗಿ ಬೆವರಿಳಿಸುತ್ತಿದ್ದಾರೆ.