ಸಿಡ್ನಿ(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕುಟುಂಬದವರ ಜೊತೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ವಿಡಿಯೋಗಳು ಅಭಿಮಾನಿಗಳನ್ನು ರಂಜಿಸುತ್ತಿವೆ.
ಟಿಕ್ಟಾಕ್ನಲ್ಲಿ ತೆಲುಗು ಗೀತೆಗೆ ಡ್ಯಾನ್ಸ್, ತೆಲುಗು ಡೈಲಾಗ್ ಹೊಡೆಯುತ್ತಿದ್ದ ವಾರ್ನರ್, ಇದೀಗ ಭಾರತೀಯರ ಟಿಕ್ಟಾಕ್ ವಿಡಿಯೋಗಳನ್ನು ಕೂಡ ಪ್ರಮೋಟ್ ಮಾಡುತ್ತಿದ್ದಾರೆ.
ಬಾಲಿವುಡ್ ಗೀತೆಗೆ ಹಳ್ಳಿಯ ಯುವಕನೊಬ್ಬ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಕುಟುಂಬದವರೊಡನೆ ಎಂಜಾಯ್ ಮಾಡಿ ರುವ ವಾರ್ನರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಡ್ಯಾನ್ ಮೂವ್ಗಳನ್ನು ತೋರಿಸುವ ಮತ್ತೊಂದು ಪ್ರತಿಭೆ. ಉತ್ತಮವಾದ ಕೆಲಸ ದೀಪಕ್’ ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ತಾವೂ ಕೂಡ ಟಿಕ್ಟಾಕ್ ಖಾತೆ ಆರಂಭಿಸಿದ ದಿನದಿಂದ ಮಾಡಿದ್ದ ಎಲ್ಲಾ ವಿಡಿಯೋಗಳನ್ನು ಸೇರಿಸಿ ರಾಮುಲೊ... ರಾಮುಲಾ ಎಂಬ ತೆಲುಗು ಗೀತೆಯನ್ನು ಸಂಯೋಜಿಸಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು.