ನವದೆಹಲಿ :ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿರುವ ಡೊನಾಲ್ಡ್ ಟ್ರಂಪ್ ಅವರನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಕಾಲೆಳೆದಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು.. ಡೊನಾಲ್ಡ್ ಟ್ರಂಪ್ ಕಾಲೆಳೆದ ಸೆಹ್ವಾಗ್
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡ ಡೊನಾಲ್ಡ್ ಟ್ರಂಪ್ ಅವರ ಕಾಲೆಳೆದಿರುವ ಸೆಹ್ವಾಗ್ ಚಿಕ್ಕಪ್ಪನ ಕಾಮಿಡಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ..
ಡೊನಾಲ್ಡ್ ಟ್ರಂಪ್ ಕಾಲೆಳೆದ ಸೆಹ್ವಾಗ್
ಡೊನಾಲ್ಡ್ ಟ್ರಂಪ್ ಫೋಟೋ ಪೋಸ್ಟ್ ಮಾಡಿರುವ ಸೆಹ್ವಾಗ್, 'ನಮ್ಮವರೂ ನಿಮ್ಮಂತೆಯೇ, ಚಿಕ್ಕಪ್ಪ ಅವರ ಕಾಮಿಡಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಅವರು ಗೆಲುವು ಸಾಧಿಸಿದ್ದು, ಮರು ಆಯ್ಕೆ ಬಯಸಿದ್ದ ಟ್ರಂಪ್ಗೆ ಹಿನ್ನಡೆ ಆಗಿದೆ. ಜೋ ಬೈಡನ್ ಎದುರು ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿರುವ ಡೊನಾಲ್ಡ್ ಟ್ರಂಪ್ ಅವರು, ಶ್ವೇತ ಭವನಕ್ಕೆ ವಾಪಸ್ ತೆರಳುವಾಗ ಬೈಡನ್ ಬೆಂಬಲಿಗರು ಲೂಸರ್.. ಲೂಸರ್ ಎಂದು ಕೂಗಿ ಅಮೆರಿಕ ಅಧ್ಯಕ್ಷರಿಗೆ ಇರಿಸುಮುರಿಸು ಉಂಟು ಮಾಡಿದ್ದರು.