ಅಹಮದಾಬಾದ್:ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಇದೀಗ ನಾಳೆಯಿಂದ ಟಿ-20 ಕ್ರಿಕೆಟ್ ಸರಣಿಗಾಗಿ ಸಜ್ಜುಗೊಂಡಿದೆ. ನಾಯಕ ಹಾಗೂ ಉಪನಾಯಕ ಹೊಸ ದಾಖಲೆ ನಿರ್ಮಿಸುವ ತವಕದಲ್ಲಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸದ್ಯ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಪ್ಲೇಯರ್ ಆಗಿದ್ದು, ಇದೀಗ ಆರಂಭಗೊಳ್ಳಲಿರುವ ಸರಣಿಯಲ್ಲಿ 72 ರನ್ಗಳಿಕೆ ಮಾಡಿದ್ರೆ 3 ಸಾವಿರ ರನ್ ಗಳಿಕೆ ಮಾಡಿದಂತಾಗುತ್ತದೆ. ಜತೆಗೆ ಇಷ್ಟೊಂದು ರನ್ಗಳಿಕೆ ಮಾಡುವ ವಿಶ್ವದ ಮೊದಲ ಪ್ಲೇಯರ್ ಆಗಲಿದ್ದಾರೆ. ಇದರ ಜೊತೆಗೆ ಮೂರು ಮಾದರಿ ಕ್ರಿಕೆಟ್ನಲ್ಲಿ 3 ಸಾವಿರ ರನ್ಗಳಿಕೆ ಮಾಡಿದಂತಾಗುತ್ತದೆ.
ಟಿ-20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು..
- ವಿರಾಟ್ ಕೊಹ್ಲಿ: 2,928
- ಮಾರ್ಟಿನ್ ಗಪ್ಟಿಲ್: 2,839
- ರೋಹಿತ್ ಶರ್ಮಾ: 2,773
- ಆ್ಯರೊನ್ ಫಿಂಚ್: 2,346
- ಶೋಯೆಬ್ ಮಲಿಕ್: 2,335 ರನ್