ಇಂದೋರ್:ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ವಿಶ್ರಾಂತಿ ಪಡೆದಿದ್ದ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ತಂಡಕ್ಕೆ ವಾಪಾಸ್ ಆಗಿದ್ದು, ಇಂದೋರ್ನಲ್ಲಿ ಇತರ ಆಟಗಾರರ ಜೊತೆ ಅಭ್ಯಾಸ ನಡೆಸಿದ್ದಾರೆ.
ಭಾರತ ತಂಡಕ್ಕೆ ಹಿಂತಿರುಗಿರುವ ಕೊಹ್ಲಿ ಪಿಂಕ್ ಬಾಲ್ ಟೆಸ್ಟ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು, ಇಷ್ಟು ದಿನಗಳ ಕಾಲ ರೆಡ್ ಬಾಲ್ನಲ್ಲಿ ಆಡಿ ಅಭ್ಯಾಸವಿರುವುದರಿಂದ ಏಕಾಏಕಿ ಪಿಂಕ್ಬಾಲ್ಗೆ ಹೊಂದಿಕೊಳ್ಳುವುದು ಕಷ್ಟ. ಪಿಂಕ್ಬಾಲ್ನಲ್ಲಿ ಆಡಲು ಹೆಚ್ಚಿನ ಏಕಾಗ್ರತೆ ಅಗತ್ಯವಾಗಿದೆ. ನಾನು ನಿನ್ನೆ ಪಿಂಕ್ ಬಾಲಿನಲ್ಲಿ ಅಭ್ಯಾಸ ಮಾಡಿದ್ದೆ. ರೆಡ್ ಬಾಲ್ಗೆ ಹೋಲಿಸಿದರೆ ಪಿಂಕ್ ಬಾಲ್ ಹೆಚ್ಚು ಸ್ವಿಂಗ್ ಆಗುತ್ತದೆ, ಅಲ್ಲದೆ ರೆಡ್ ಬಾಲ್ನಷ್ಟು ವೇಗ ಹೊಂದಿಲ್ಲ. ಇದು ಬೌಲರ್ ಸ್ನೇಹಿಯಾಗಿದ್ದು, ಪಿಚ್ ಬೌಲರ್ಗಳಿಗಾಗಿ ತಯಾರಿಸಿದರೆ ಪಂದ್ಯವನ್ನು ಬೌಲರ್ಗಳು ಗೆಲ್ಲಿಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.